ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಐಟಿ ದಾಳಿಯ ನಂತ್ರ ತಣ್ಣಗಾಗಿದ್ದ ಡಿಕೆಶಿ ಐಟಿ ದಾಳಿ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇ ಡಿ ಬಲೆಗೆ ಬಿದ್ರಾ ಇಂಧನ ಸಚಿವ ಡಿ.ಕೆ.ಶಿ ಅನ್ನೋ ಪ್ರಶ್ನೆ ಎದುರಾಗಿದೆ.
ಬೆಂಗಳೂರು(ಸೆ.13): ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಐಟಿ ದಾಳಿಯ ನಂತ್ರ ತಣ್ಣಗಾಗಿದ್ದ ಡಿಕೆಶಿ ಐಟಿ ದಾಳಿ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇ ಡಿ ಬಲೆಗೆ ಬಿದ್ರಾ ಇಂಧನ ಸಚಿವ ಡಿ.ಕೆ.ಶಿ ಅನ್ನೋ ಪ್ರಶ್ನೆ ಎದುರಾಗಿದೆ.
ಇವತ್ತು ಇಡಿ ಕರೆ ಬಂದಿರೋದನ್ನ ಒಪ್ಪಿಕೊಂಡ ಡಿಕೆಶಿ ‘ನಿನ್ನೆ ನನಗೆ ಇಡಿ ಅಧಿಕಾರಿಗಳು ಕರೆ ಮಾಡಿದ್ದು ನಿಜ’ ಅಂತ ಸ್ಪಷ್ಟಪಡಿಸಿದ್ರು. ಅಲ್ದೆ, ಕ್ರಾಸ್ ಚೆಕ್ ಮಾಡಿದಾಗ ಇಡಿ ಫೋನ್ ಅನ್ನೋದು ಗೊತ್ತಾಗಿದೆ, ಇಡಿಯವರು ನೋಟಿಸ್ ಕಳಿಸಲು ಅಡ್ರೆಸ್ ಕೇಳಿದ್ದರು ಅಂತ ಹೇಳಿದ್ರು.
