ಬೆಂಗಳೂರು(ಜು.23) : ವಿಶ್ವಾಸಮತಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ಸ್ವತಃ ಸ್ಪೀಕರ್ ರಮೇಶ್ ಕುಮಾರ್  ಡೆಡ್ ಲೈನ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೋಸ್ತಿ ಪಡೆ ಅಂತಿಮ ಹಂತದ ಪ್ರಯತ್ನ ನಡೆಸಿದ್ದಾರೆ. 

ಸರ್ಕಾರ ಉಳಿಸಲು ಸಚಿವ ಡಿ.ಕೆ.ಶಿವಕುಮಾರ್ ಕೊನೆ ಹಂತದ ಪ್ರಯತ್ನ ಮಾಡಿದ್ದಾರೆ. ವಿಶ್ವಾಸ ಮತ ಸಾಬೀತು ಪಡಿಸಲು ತಲೆ ಕೆಡಿಸಿಕೊಂಡ ಅವರು ಕಲಾಪದಿಂದಲೇ ಹೊರಬಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದರು. 

ತಾಜ್ ವೆಸ್ಟೆಂಡ್ ನಲ್ಲಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಡಿಕೆಶಿ ರಾಜಕೀಯ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ವೇಳೆ ವಿಶ್ವಾಸಮತದಲ್ಲಿ ಗೆಲ್ಲಲಾಗದಿದ್ದಲ್ಲಿ ಮೈತ್ರಿ ಪಾಳಯದ ಮುಂದಿನ ನಡೆ ಏನು ಎನ್ನವ ವಿಚಾರವನ್ನು ಟ್ರಬಲ್ ಶೂಟರ್ ಡಿಕೆಶಿ ಸಿಎಂ ಕುಮಾರಸ್ವಾಮಿ ಜೊತೆಗೆ ಗಂಭೀರ ಸಮಾಲೋಚನೆ ನಡೆಸಿದರು.

ಸುವರ್ಣ ನ್ಯೂಸ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ https://bit.ly/32JJ0DE ಕ್ಲಿಕ್ ಮಾಡಿ