ಐಟಿ ದಾಳಿಯಲ್ಲಿ ಸಿಕ್ಕ ಡಿಕೆ ಶಿವಕುಮಾರ್ ಆಸ್ತಿ ಎಷ್ಟು ಗೊತ್ತಾ..?

DK Shivakumar Case news
Highlights

ಆದಾಯ ತೆರಿಗೆ ಇಲಾಖೆಯ ಗಾಳಕ್ಕೆ ಸಿಲುಕಿರುವ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಆರ್ಥಿಕ ಅಪರಾಧ ವಿಶೇಷ ನ್ಯಾಯಾಲಯ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ (ಅಭಿಯೋಜನೆ)ಗೆ ಅನುಮತಿ ನೀಡುವುದೇ ಎಂಬ ಕುತೂಹಲ ಈಗ ಆರಂಭವಾಗಿದೆ.

ಬೆಂಗಳೂರು :  ಆದಾಯ ತೆರಿಗೆ ಇಲಾಖೆಯ ಗಾಳಕ್ಕೆ ಸಿಲುಕಿರುವ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಆರ್ಥಿಕ ಅಪರಾಧ ವಿಶೇಷ ನ್ಯಾಯಾಲಯ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ (ಅಭಿಯೋಜನೆ)ಗೆ ಅನುಮತಿ ನೀಡುವುದೇ ಎಂಬ ಕುತೂಹಲ ಈಗ ಆರಂಭವಾಗಿದೆ.

ದಾಳಿ ವೇಳೆ ಸಚಿವ ಶಿವಕುಮಾರ್‌ ಅವರು ಕಾಗದವೊಂದನ್ನು ಹರಿದು ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಐಟಿ ಅಧಿಕಾರಿಗಳು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಪ್ರತಿವಾದಿಗಳ ವಾದವನ್ನು ಆಲಿಸಲು ಬರುವ ಮಾ.22ರಂದು ಶಿವಕುಮಾರ್‌ ಅವರ ಖುದ್ದು ಹಾಜರಾತಿಗೆ ಸೂಚನೆ ನೀಡಿದೆ. ಅಂದು ಕೋರ್ಟ್‌ ಏನು ನಿರ್ಧರಿಸಲಿದೆ ಎಂಬುದು ಮಹತ್ವದ್ದಾಗಿರುತ್ತದೆ.

ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯು ದಾಖಲೆ ನಾಶ ಮಾಡಲು ಅಧಿಕಾರಿಗಳ ಮುಂದೆಯೇ ಪ್ರಯತ್ನಿಸಿದ್ದಾರೆ. ಇದನ್ನು ಕ್ರಿಮಿನಲ್‌ ಪ್ರಕರಣವೆಂದು ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿದ್ದರೆ ಸಿವಿಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗುವ ಸಾಧ್ಯತೆಯಿದೆ.

ಒಂದು ವೇಳೆ ನ್ಯಾಯಾಲಯ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಕಾಗದ ಪತ್ರ ಹರಿದು ಹಾಕಿದ ಘಟನೆ ನಡೆದ ಸ್ಥಳ ಯಾವ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರಲಿದೆಯೋ ಆ ಪೊಲೀಸ್‌ ಠಾಣೆಗೆ ತನಿಖೆ ನಡೆಸುವಂತೆ ಸೂಚಿಸುವ ಸಾಧ್ಯತೆ ಇದೆ. ಕಾಗದ ಹರಿದು ಹಾಕಿರುವ ಪ್ರಕರಣ ಮಾತ್ರವಲ್ಲದೇ ದಾಳಿಯ ಒಟ್ಟಾರೆ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ಐಟಿ ಮೂಲಗಳು ಹೇಳಿವೆ.

ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲಿಸಿರುವ ದೂರಿನಲ್ಲಿ ಕೆಲವು ಹಣದ ವಹಿವಾಟು ನಡೆಸಿರುವ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳ ಪರಿಶೀಲನೆ ನಡೆಸಿ, ವಶಪಡಿಸಿಕೊಂಡಿರುವ ದಾಖಲೆ ಮತ್ತು ನಗದು ವಿವರವನ್ನು ದೂರಿನಲ್ಲಿ ನಮೂದಿಸಲಾಗಿದೆ.

ಕೆಲವು ಉದ್ಯಮಿಗಳ ಜತೆ ನಿಕಟ ಸಂಪರ್ಕ ಹೊಂದಿರುವ ಶಿವಕುಮಾರ್‌ ಅವರು ಹಣದ ವಹಿವಾಟು ನಡೆಸಿದ್ದಾರೆ. 2015ರಲ್ಲಿ ಉದ್ಯಮಿಯೊಬ್ಬರು ಶಿವಕುಮಾರ್‌ ಖಾತೆಗೆ ಐದು ಕೋಟಿ ಮತ್ತು 40 ಲಕ್ಷ ರು. ಜಮೆ ಮಾಡಿರುವುದು ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಆದರೆ, ಯಾವ ಕಾರಣಕ್ಕಾಗಿ ಹಣ ಜಮೆ ಮಾಡಲಾಗಿದೆ ಎಂಬ ಸ್ಪಷ್ಟಮಾಹಿತಿ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ.

ಸಚಿವರ ಜತೆ ನಿಕಟ ಸಂಪರ್ಕ ಹೊಂದಿದ ಉದ್ಯಮಿಗಳನ್ನು ಸಹ ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹಣಕಾಸು ವ್ಯವಹಾರದ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಶಿವಕುಮಾರ್‌ ಅವರಿಂದ ಉದ್ಯಮಿಗಳ ಸಂಸ್ಥೆಗಳಿಗೆ ಹಣ ಹೋಗಿರುವ ಬಗ್ಗೆ ಮಾಹಿತಿ ಕ್ರೋಡೀಕರಿಸಲಾಗಿದೆ. ಅನಧಿಕೃತವಾಗಿ ಶಿವಕುಮಾರ್‌ ಅವರು ಕೆಲವು ಉದ್ಯಮಿಗಳಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದಾರೆ. 2015-16ನೇ ಸಾಲಿನಿಂದ 2017-18ನೇ ಸಾಲಿನವರೆಗೆ 13 ಕೋಟಿ ರು.ಗಿಂತ ಹೆಚ್ಚು ಸಾಲ ನೀಡಿದ್ದಾರೆ. 2017-18ನೇ ಸಾಲಿನ ಐಟಿ ರಿಟನ್ಸ್‌ರ್‍ ಸಲ್ಲಿಕೆ ಮಾಡಿಲ್ಲ. ಇನ್ನಷ್ಟೇ ಸಲ್ಲಿಕೆ ಮಾಡಬೇಕಿದೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.

₹8.81ಕೋಟಿ:ದಿಲ್ಲಿಯ 5 ಕಡೆ ಸಿಕ್ಕ

ನಗದು ಮತ್ತು ಲೆಕ್ಕದ ವಿವರ

ಥಿ ₹41ಲಕ್ಷ: ಸಫ್ಜರ್‌ಜಂಗ್ ಎನ್‌ಕ್ಲೇವ್

ಬಿ-2ರಲ್ಲಿ ದೊರೆತ ಆಸ್ತಿ

ಥಿ ₹1.37 ಕೋಟಿ: ಸಫ್ಜರ್‌ಜಂಗ್ ಎನ್

ಕ್ಲೇವ್ ಬಿ-4ರಲ್ಲಿ ದೊರೆತ ಆಸ್ತಿ

ಥಿ ₹6.68 ಕೋಟಿ: ಸಫ್ಜರ್‌ಜಂಗ್ ಎನ್

ಕ್ಲೇವ್ ಬಿ-5ರಲ್ಲಿ ದೊರೆತ ಆಸ್ತಿ

ಥಿ ₹12 ಲಕ್ಷ: ದೆಹಲಿಯ ಡಿಕೆಶಿ ಆಪ್ತ

ಆಂಜನೇಯ ಮನೆಯಲ್ಲಿ ಸಿಕ್ಕ ಹಣ

ಥಿ ₹23 ಲಕ್ಷ: ಮತ್ತೊಬ್ಬ ಆಪ್ತ ಜೋವಿನ್

ಜೋಸೆಫ್ ನಿವಾಸದಲ್ಲಿ ಸಿಕ್ಕ ಹಣ

loader