ಬೆಂಗಳೂರು[ಸೆ. 10]  ರಾಜಕೀಯ ದ್ವೇಷದ ಕಾರಣದಿಂದ ನಾನು ಟಾರ್ಗೆಟ್ ಆಗಿದ್ದೇನೆ ಎಂದು ಡಿಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ.

ಇಡಿ ವಶದಲ್ಲಿ  ಇದ್ದರೂ ಭೇಟಿಯಾದ ಕುಂಟುಬಸ್ಥರ ಬಳಿ ಹೇಳಿಸಿ  ಟ್ವೀಟ್  ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ದೇವರು ಹಾಗೂ ನ್ಯಾಯಾಂಗದ ಮೇಲೆ ನನಗೆ ಅಪಾರ ನಂಬಿಕೆಯಿದೆ. ಕಾನೂನು ಹಾಗೂ ರಾಜಕೀಯವಾಗಿ ವಿಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸವನ್ನು ಡಿಕೆಶಿ ಹೊರ ಹಾಕಿದ್ದಾರೆ. ಸೆ. 13ರವರೆಗೆ  ಡಿಕೆ ಶಿವಕುಮಾರ್  ಇಡಿ ವಶದಲ್ಲಿ  ಇರಬೇಕಿದ್ದು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. 

'ಮಾರಿ ಕೋಣ ಕಡಿದಂತೆ ‘ಡಿಕೆಶಿ ಬಲಿ’ ಕೊಟ್ಟಕಾಂಗ್ರೆಸ್ಸಿಗರು'

ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರ ಕೂಟ ಬೆಂಗಳೂರಿನಲ್ಲಿ ಸೆ. 11 ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಶಾಂತಿಯುತ ಪ್ರತಿಭಟನೆ  ನಡೆಸಿ.. 'ಜನರಿಗೆ ತೊಂದರೆ ಕೊಡುವುದು ಬೇಡ, ಸಾರ್ವಜನಿಕ ಆಸ್ತಿಗೆ ಧಕ್ಕೆ ಬೇಡ ಎಂದು ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.