ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕನಕ ಜಯಂತ್ಯುತ್ಸವದಲ್ಲಿ ಡಿಕೆಶಿ ಮಾತಾಡಿದ್ರು

ಇಂಧನ ಸಚಿವ ಡಿಕೆ ಶಿವಕುಮಾರ ಇಂದು ಸಾಂಪ್ರದಾಯಿಕ ರಾಜಕೀಯ ಎದುರಾಳಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿ ಅಚ್ಚರಿ ಮೂಡಿಸಿದರು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕನಕ ಜಯಂತ್ಯುತ್ಸವದಲ್ಲಿ ಡಿಕೆಶಿ ಮಾತಾಡಿದ್ರು. ಅನಿತಾ ಕುಮಾರಸ್ವಾಮಿ ಅವ್ರನ್ನು ನನ್ನ ಸಹೋದರಿ ಅನಿತಾ ಕುಮಾರಸ್ವಾಮಿ ಅವ್ರು ಕೂಡ ಬಂದಿದ್ದಾರೆ ಎಂದ್ರು. ನನ್ನ ಸಹೋದರಿ ಅನಿತಾ ಅವ್ರು ದೀಪ ಬೆಳಗಿಸಿದ್ದಾರೆ ಎಂದು ಮತ್ತೊಮ್ಮೆ ಹೇಳಿ ಅಚ್ಚರಿ ಮೂಡಿಸಿದರು. ಅನಿತಾ ಅವರು ನಿಮ್ಮನ್ನು ನಂಬಿ ಇಲ್ಲಿಗೆ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಷೇತ್ರದಲ್ಲಿ ತಾತ್ಕಾಲಿಕ ನಾಯಕರು ಬರ್ತಾರೆ ಹೋಗ್ತಾರೆ. ನಾವೇ ಶಾಶ್ವತ. ನಿಮ್ಮ ಹೆಣವನ್ನು ಹೊರುವವರು ನಾವೇ ಎಂದು ಹೇಳುವ ಮೂಲಕ ಶಾಸಕ ಯೋಗೇಶ್ವರಗೂ ಡಿಕೆಶಿ ಟಾಂಗ್​ ನೀಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಅನಿತಾ ಕುಮಾರಸ್ವಾಮಿ ಅಕ್ಕಪಕ್ಕದ ಆಸನದಲ್ಲಿ ಕುಳಿತು ಪರಸ್ಪರ ಮಾತನಾಡಿದ್ದು, ಗಮನ ಸೆಳೆಯಿತು. ಇನ್ನು ಕಾರ್ಯಕ್ರಮದ ಉದ್ಘಾಟನೆ ವೇಳೆ ಸಚಿವರು ಅನಿತಾ ಅವರಿಗೆ ಕ್ಯಾಂಡಲ್ ನೀಡಿ ದೀಪ ಹಚ್ಚುವಂತೆ ಹೇಳಿದ್ದು ವಿಶೇಷವಾಗಿತ್ತು.