ಚುನಾವಣಾ ಕಣಕ್ಕೆ ಧುಮುಕಿದ ಡಿ.ಕೆ ರವಿ ತಾಯಿ ಗೌರಮ್ಮ

DK Ravi Mother Enter Politics
Highlights

ಕೋಲಾರದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಪಕ್ಷೇತರರಾಗಿ ಇಲ್ಲಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಡಿ.ಕೆ ರವಿ  ತಾಯಿ ಗೌರಮ್ಮ ನಿರ್ಧರಿಸಿದ್ದಾರೆ. ಕೋಲಾರ ತಾಲೂಕಿನ ವಿವಿಧೆಡೆ ರವಿ ಅವರ ತಾಯಿ ಗೌರಮ್ಮ ಪ್ರಚಾರದಲ್ಲಿ ತೊಡಗಿದ್ದಾರೆ.

ಕೋಲಾರ : ಕೋಲಾರದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಪಕ್ಷೇತರರಾಗಿ ಇಲ್ಲಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಡಿ.ಕೆ ರವಿ  ತಾಯಿ ಗೌರಮ್ಮ ನಿರ್ಧರಿಸಿದ್ದಾರೆ. ಕೋಲಾರ ತಾಲೂಕಿನ ವಿವಿಧೆಡೆ ರವಿ ಅವರ ತಾಯಿ ಗೌರಮ್ಮ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ವೇಳೆ ಮಾತನಾಡಿದ ಗೌರಮ್ಮ ಜೆಡಿಎಸ್ ಟಿಕೆಟ್ ಕೊಡಿಸುವುದಾಗಿ ಹೇಳಿ ಏನೂ ಮಾಡಿಲ್ಲ. ನನ್ನ ಮಗನ ಸಾವಿನ ಮರು ತನಿಖೆ ಮಾಡಿಸಿ ಕೋಲಾರ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ಹೇಳಿದ್ದಾರೆ.

ಇನ್ನು ಕೋಲಾರ ತಾಲೂಕಿನಲ್ಲಿ ಕಳೆದ ಮೂರು ದಿನದಿಂದ ಪ್ರಚಾರ ಕಾರ್ಯದಲ್ಲಿ ಕೈಗೊಂಡಿದ್ದು, ವೇಮಗಲ್ ಹೋಬಳಿಯಲ್ಲಿ ಇಂದು ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ವಿರುದ್ಧ ಬಂಡಾಯವಾಗಿ ಗೌರಮ್ಮ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದ್ದಾರೆ.

loader