ದೀಪಾವಳಿಗೆ ಪಟಾಕಿಯನ್ನು ಹೊಡೆಯುವಂತಿಲ್ಲವೆಂದು ನಿಷೇಧ ಹೇರಿರುವ  ಆದೇಶವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಇಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಪಟಾಕಿ ಹೊಡೆಯುವುದರ ಮೇಲೆ ನಿಷೇಧ ಹೇರಿರುವುದಕ್ಕೆ ಜನರು ಮತೀಯ ಬಣ್ಣ ಕೊಡುತ್ತಿರುವುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ (ಅ.13): ದೀಪಾವಳಿಗೆ ಪಟಾಕಿಯನ್ನು ಹೊಡೆಯುವಂತಿಲ್ಲವೆಂದು ನಿಷೇಧ ಹೇರಿರುವ ಆದೇಶವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಇಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಪಟಾಕಿ ಹೊಡೆಯುವುದರ ಮೇಲೆ ನಿಷೇಧ ಹೇರಿರುವುದಕ್ಕೆ ಜನರು ಮತೀಯ ಬಣ್ಣ ಕೊಡುತ್ತಿರುವುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಜನರು ದೀಪಾವಳಿಯನ್ನು ಆಚರಿಸುವುದು ಬೇಡ ಎಂದು ನಾವು ಹೇಳಿಲ್ಲ. ಆಚರಣೆಯನ್ನು ನಾವು ತಡೆಯುತ್ತಲೂ ಇಲ್ಲ. ಇದೊಂದು ಪ್ರಯೋಗವಷ್ಟೇ. ನಾನು ಕೂಡಾ ಆಧ್ಯಾತ್ಮಿಕ ಒಲವುಳ್ಳ ವ್ಯಕ್ತಿ ಆದರೆ ಪಟಾಕಿ ನಿಷೇಧ ಅದಕ್ಕೆ ಹೊರತಾಗಿದ್ದು ಎಂದು ನ್ಯಾ. ಎ ಕೆ ಸಿಕ್ರಿ ಹೇಳಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೀಪಾವಳಿಗೆ ಪಟಾಕಿ ಹೊಡೆಯುವಂತಿಲ್ಲವೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಪಟಾಕಿ ಮಾರಾಟದ ಮೇಲೂ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಪಟಾಕಿ ಮಾರಾಟಗಾರರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶಕ್ಕೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.