ಜಿಲ್ಲಾಧಿಕಾರಿಯೋರ್ವರು ತಮ್ಮ ಹುದ್ದೆಗೆ ರಾಜೀನಾಮೆಗೆ ನೀಡಿದ್ದು, ರಾಜಕೀಯ ರಂಗ ಪ್ರವೇಶ ಮಾಡುವ ಸಾಧ್ಯತೆ ಇದೆ. ಬಿಜೆಪಿ ಸೇರ್ಪಡೆಗೊಂಡು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. 

ರಾಯ್ಪುರ : ಜಿಲ್ಲಾಧಿಕಾರಿಯೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. 2005ನೇ ಬ್ಯಾಚಿನ ಐಎಎಸ್ ಅಧಿಕಾರಿ ಚೌಧರಿ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಆದರೆ ಈ ಬಗ್ಗೆ ಅವರು ಯಾವುದೇ ರೀತಿಯಾದ ಪ್ರತಿಕ್ರಿಯೆಯನ್ನೂ ಕೂಡ ನೀಡಿಲ್ಲ. ಆದರೆ ಮೂಲಗಳ ಪ್ರಕಾರವಾಗಿ ಅವರು ಬಿಜೆಪಿಯನ್ನು ಸೇರಿ ರಾಜಕಾರಣಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರವಿನ್ನೂ ಕೂಡ ಖಚಿತವಾಗಿಲ್ಲ. ಆದರೆ ಬಿಜೆಪಿ ಮುಖಂಡರು ಅವರು ಒಂದು ವೇಳೆ ಪಕ್ಷಕ್ಕೆ ಬಂದರೆ ಆತ್ಮೀಯ ಸ್ವಾಗತ ಎಂದು ಹೇಳಿದ್ದಾರೆ. 

 ಇದೇ ವರ್ಷದ ಕೊನೆಯಲ್ಲಿ ಚತ್ತೀಸ್ ಗಢದಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಚೌಧರಿ ಅವರು ಪಟೇಲ್ ಅಗರಿಯಾ ಸಮುದಾಯದವರಾಗಿದ್ದು, ಒಬಿಸಿ ಮತಗಳನ್ನು ಸೆಳಯುವ ಸಲುವಾಗಿ ಬಿಜೆಪಿ ಇವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.