ಗದಗ[ಮಾ. 07]  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಶ್ರೀರಾಮುಲು ನಡುವೆ ಮುನಿಸು ಹುಟ್ಟಿಕೊಂಡಿದೆಯೇ? ಬಿಜೆಪಿ ವಲಯದಲ್ಲಿ ಇಂಥದ್ದೊಂದು ಪ್ರಶ್ನೆಯೂ ಎದ್ದಿದೆ.

ಎರಡು ಗಂಟೆ ಅಕ್ಕಪಕ್ಕ ಕುಳಿತಿದ್ದರೂ ಇಬ್ಬರು ನಾಯಕರು ಪರಸ್ಪರ ಮಾತನಾಡಿಕೊಂಡಿಲ್ಲ. ನಾನೊಂದು ತೀರ ನೀನೊಂದು ತೀರ ಅಂಥ ಕುಳಿತಿದ್ದರು.  ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ವಿಚಾರ ಇಬ್ಬರ ನಡುವಿನ ಮುನಿಸಿಗೆ ಕಾರಣ ಎಂದು ಹೇಳಲಾಗಿದೆ.

ಲೋಕಸಭೆ ಎಲೆಕ್ಷನ್ 2019: ಶ್ರಿರಾಮುಲುಗೆ ಹೊಸ ಟಾಸ್ಕ್ ಕೊಟ್ಟ BSY

ಬಲಭಾಗದಲ್ಲಿ ಕುಳಿತ ಬಿಜೆಪಿ ಶಾಸಕ ಸಿ.ಸಿ.ಪಾಟೀಲ್  ಜತೆ ಬಿ.ಎಸ್.ಯಡಿಯೂರಪ್ಪ ನಿರಂತರಾಗಿ ಮಾತನಾಡುತ್ತಿದ್ದರು.