ಉಡುಪಿ ಬಿಜೆಪಿಯಲ್ಲಿ ಭಿನ್ನಮತ ಶಮನವಾಗುವುದು ಹೇಗೆ..?

First Published 12, Apr 2018, 2:03 PM IST
Dissent in Udupi BJP
Highlights

ಉಡುಪಿಯ ಕುಂದಾಪುರದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡ ವಿಚಾರವಾಗಿ ಇದೀಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಉಡುಪಿ : ಉಡುಪಿಯ ಕುಂದಾಪುರದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡ ವಿಚಾರವಾಗಿ ಇದೀಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪಕ್ಷದೊಳಗಿನ ಭಿನ್ನಮತವನ್ನು ರಾಜ್ಯಾಧ್ಯಕ್ಷರು ಶಮನ ಮಾಡುತ್ತಾರೆ.  ಅಧಿಕೃತ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾಗಿದೆ. ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ ಎಂದು ಅವರು ಈ ವೇಳೆ ಹೇಳಿದ್ದಾರೆ.

ಭಿನ್ನಮತೀಯರು ಪಕ್ಷದಲ್ಲಿ ಇದ್ದಾರೋ ಇಲ್ಲವೋ ಅವರೇ ತೀರ್ಮಾನಿಸಲಿ. ಪಕ್ಷದಲ್ಲಿದ್ದರೆ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಪಕ್ಷ ತೊರೆದವರಿಂದ ಯಾವ ರೀತಿಯಾಗಿ ಹಾನಿಯಾಗುತ್ತದೆ ಎಂದು ಜನರಿಗೆ ಗೊತ್ತು ಎಂದು ಈ ವೇಳೆ  ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಚುನಾವಣೆ ಸಂದರ್ಭ ಎಲ್ಲರ ಸಹಾಯ ಬೇಕು. ಪಕ್ಷದ ಹಿರಿಯ ನಾಯಕ ಎ.ಜಿ ಕೊಡ್ಗಿಯನ್ನು ಭೇಟಿಯಾಗಿದ್ದೇನೆ. ಕೊಡ್ಗಿಯವರ ಆಶೀರ್ವಾದ ಪಡೆದು ಬಂದಿದ್ದೇನೆ. ಎ.ಜಿ ಕೊಡ್ಗಿಯವರು ಹಿರಿಯರು, ಅವರ ಮೇಲೆ ಗೌರವವಿದೆ ಎಲ್ಲಾ ಕಡೆ ಸ್ವಲ್ಪ ಅಸಮಾಧಾನ ಇರುತ್ತದೆ. ದಿನನಿತ್ಯ ಜನರ ಕೆಲಸ ಮಾಡಿದ್ದೇನೆ. ಚುನಾವಣಾ ಸಂದರ್ಭ ವಿಶೇಷ ಪ್ರಚಾರ ಮಾಡುವುದಿಲ್ಲ ಎಂದು ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.  

loader