ಯುವತಿಯೊಬ್ಬಳ ಮೇಲೆ ಜೋಧಪುರ ಆಶ್ರಮದಲ್ಲಿ 2013ರಲ್ಲಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಅಸಾರಾಂ ಬಾಪು ಜೈಲುವಾಸ ಅನುಭವಿಸುತ್ತಿದ್ದಾನೆ.

ನವದೆಹಲಿ(ಸೆ.16): :ಅತ್ಯಾಚಾರ ಪ್ರಕರಣದ ಆರೋಪಿ ಅಸಾರಾಂ ಬಾಪು ತಾನು ಸಂತನೂ ಅಲ್ಲ. ಧರ್ಮ ಬೋಧಕನೂ ಅಲ್ಲ. ತಾನೊಬ್ಬ ಕತ್ತೆ ವರ್ಗಕ್ಕೆ ಸೇರಿದವರನು ಎಂದು ಹೇಳಿಕೊಂಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುವತಿಯೊಬ್ಬಳ ಮೇಲೆ ಜೋಧಪುರ ಆಶ್ರಮದಲ್ಲಿ 2013ರಲ್ಲಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಅಸಾರಾಂ ಬಾಪು ಜೈಲುವಾಸ ಅನುಭವಿಸುತ್ತಿದ್ದಾನೆ.

ಗುರುವಾರ ಕೋರ್ಟ್ ವಿಚಾರಣೆಗೆ ಅಸಾರಾಂನನ್ನು ಕರೆತರಲಾಗಿತ್ತು. ‘ಈ ವೇಳೆ ಅಖಿಲ ಭಾರತೀಯ ಅಖಾಡಾ ಪರಿಷದ್ ನಿಮ್ಮನ್ನು ನಕಲಿ ಸಾಧು ಎಂದು ಕರೆದಿದೆಯಲ್ಲ? ಹಾಗಿದ್ದರೆ ನೀವು ಯಾವ ವರ್ಗಕ್ಕೆ ಸೇರಿದವರು’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಪು, ತಾನು ಸಂತನೂ ಅಲ್ಲ ಅಥವಾ ಧಾರ್ಮಿಕ ಸಂಸ್ಥೆಯ ಬೋಧಕನೂ ಅಲ್ಲ. ನಾನು ಕತ್ತೆಯ ವರ್ಗಕ್ಕೆ ಸೇರಿದವ ಎಂದು ಕುಪಿತಗೊಂಡು ಪ್ರತಿಕ್ರಿಯಿಸಿದ್ದಾನೆ.