ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ  ಘಟನೆ ವಿಜಯಪುರದ  ಬಸವನಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.

ವಿಜಯಪುರ(ಜು.16): ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.

ಕೆ. ಎಸ್. ಈಶ್ವರಪ್ಪ ನೇತೃತ್ವದಲ್ಲಿ ಮಂಡಳ ಕಾರ್ಯಕರ್ತರ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಪಕ್ಕದ ಸರ್ಕಾರಿ ಶಾಲೆಯ ಧ್ವಜದ ಕಂಬದಲ್ಲಿ ಬಿಜೆಪಿ ಪಕ್ಷದ ಧ್ವಜಾರೋಹಣ ಮಾಡಿರುವ ಅಚಾತುರ್ಯ ಘಟನೆ ನಡೆದಿದೆ. ರಾಷ್ಟ್ರ ಬಾವುಟ ಹಾರಿಸಬೇಕಿದ್ದ ಸರ್ಕಾರಿ ಶಾಲೆಯ ಕಂಬದಲ್ಲಿ ಬಿಜೆಪಿ ಪಕ್ಷದ ಧ್ವಜವನ್ನು ಹಾರಿಸಿದ ಬಿಜೆಪಿ ನಾಯಕರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.

ಇನ್ನು ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಧ್ವಜಾರೋಹಣಕ್ಕೆ ಗ್ರಾ. ಪಂ ಅಧ್ಯಕ್ಷೆ ಸುಶೀಲಾಬಾಯಿ ಪ್ರಶಾಂತ ಪವಾರ ಕಾರಣವೆಂದು ಆರೋಪ ಮಾಡಿದ್ದಾರೆ.