ಬೆಂಗಳೂರು [ಸೆ.11] : ಶೀಘ್ರದಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದಾರೆ. 

ಹೋಸಕೋಟೆ ಉಪ ಚುನಾವವಣೆಗೆ ನಾನೇ ನಿಲ್ಲುತ್ತೇನೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಹಿಂದೆ ರಾಜಕೀಯ ನಿವೃತ್ತ ಬಗ್ಗೆ ಮಾತನಾಡಿದ್ದ ಎಂಟಿಬಿ ಉಲ್ಟಾ ಹೊಡೆದಿದ್ದಾರೆ.  

ಅನರ್ಹ ಶಾಸಕರೆಲ್ಲರೂ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ಕೂಡ ಈ ಬಗ್ಗೆ ತೀರ್ಪು ಬಂದಿಲ್ಲ. ಒಂದು ವೇಳೆ ಚುನಾವಣೆಗೂ ಮುನ್ನವೇ  ಕೋರ್ಟ್ ತೀರ್ಪು ಬರಲಿಲ್ಲವೆಂದರೆ ನನ್ನ ಮಗನನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಅವರು ಯಾವ ಪಕ್ಷದಿಂದ ಉಪ ಚುನಾವಣೆ ಎದುರಿಸುತ್ತೇನೆ ಎನ್ನುವುದನ್ನು ಮಾತ್ರ ಹೇಳಿಲ್ಲ. ಶಿಘ್ರದಲ್ಲೇ ಈ ಬಗ್ಗೆ ತಿಳಿಸುವುದಾಗಿ  ಎಂಟಿಬಿ ನಾಗರಾಜ್ ಹೇಳಿದರು.