ಮಂಡ್ಯ(ಸೆ.14): ಕಾವೇರಿ ಹೋರಾಟದಲ್ಲಿ ಮೃತಪಟ್ಟ ಉಮೇಶ್ ಮತ್ತು ಕುಮಾರ್ ಕುಟುಂಬಕ್ಕೆ ೫ ಲಕ್ಷ ಧನಸಹಾಯ ಮಾಡಿದ್ದೇವೆ ಎಂದು ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

ಬಂಗಾರಪ್ಪ ಬಿಟ್ರೆ ಯಾರು ಕೂಡಾ ಧೃಢ ನಿರ್ಧಾರ ತಗೊಂಡಿಲ್ಲ. ತುಂಬಾ ಜನ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೋರಾಟ ಮಾಡಬೇಕಾಗಿರುವುದು ದೆಹಲಿಯಲ್ಲೇ ವಿನಾ ಕರ್ನಾಟಕದಲ್ಲಿ ಅಲ್ಲ. ಸುಪ್ರೀಮ್ ಕೋರ್ಟ್'ಗೆ ಈ ರೀತಿಯ ತೀರ್ಪು ನೀಡಲು ಎಷ್ಟರ ಮಟ್ಟಿಗೆ ಅಧಿಕಾರ ಇದೆ ಅನ್ನೋದು ಕೂಡಾ ಚರ್ಚೆ ಆಗಬೇಕಾಗಿದೆ. ಪ್ರಧಾನಿ ಬಿಜೆಪಿಯವರ ಆಸ್ತಿ ಅಲ್ಲ . ಅವತ್ತಿನ ರಾಜಕಾರಣ ಮಾಡಿಕೊಳ್ಳೋದಾದರೆ ಈ ಸಮಸ್ಯೆ ಬಗಹರಿಯಲ್ಲ . ಒಕ್ಕೂಟ ವ್ಯವಸ್ಥೆಯಿಂದ ನಮ್ಮನ್ನ ಕೈಬಿಡಿ ಎಂದು ಒತ್ತಾಯಿಸಬೇಕಾದ ಪರಿಸ್ಥಿತಿ ಇದೆ. ಘೋಷಣೆ ಕೂಗಿ ಹೋರಾಟ ಮಾಡೋದು ಶೋಭೆ ತರಲ್ಲ. ನಾವೆಲ್ಲರೂ ಗೋಮುಖ ವ್ಯಾಘ್ರತನ ಬಿಟ್ಟು ಹೋರಾಟ ಮಾಡೋಣ. ರಾಜ್ಯದ ಸಂಸದರು ಮೌನ ತಳೆದಿರುವುದು ಸರಿಯಲ್ಲ ಎಂದು ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.