ಆತ್ಮಹತ್ಯೆಗೆ ಮುನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಪ್ರಾಯ ಪ್ರಕಟಿಸಿ ಬಳಿಕ ನೇಣಿಗೆ ಶರಣಾಗಿದ್ದಾನೆ.

ದಾವಣಗೆರೆ (ಜ.29): ಪ್ರೇಯಸಿ ಫೋನ್ ರಿಸಿಔ ಮಾಡಿಲ್ಲ ಬ ಕಾರಣಕ್ಕೆ ಯುವಕನೊಬ್ಬ ತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಚೆನ್ನಗಿರಿಯಲ್ಲಿ ನಡೆದಿದೆ.

ಸಂತೆಬೆನ್ನೂರು ಗ್ರಾಮದ ಪ್ರವೀಣ ಉಪ್ಪಾರ(19) ಎಂಬ ಯುವಕ ಕಳೆದ ನಾಲ್ಕು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು ಈಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ಮುನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಪ್ರಾಯ ಪ್ರಕಟಿಸಿ ಬಳಿಕ ನೇಣಿಗೆ ಶರಣಾಗಿದ್ದಾನೆ.

ಇತ್ತೀಚೆಗೆ ಪ್ರೇಯಸಿ ತನ್ನ ಪೋನ್ ರಿಸೀವ್ ಮಾಡುತ್ತಿಲ್ಲ, ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಆಕೆಗೆ ಶಿಕ್ಷೆ ಕೊಡಿಸುವಂತೆ ಫೇಸ್’ಬುಕ್ ನಲ್ಲಿ ಮನವಿ ಆತ ಮನವಿ ಮಾಡಿಕೊಂಡಿದ್ದಾನೆ.

ಹುಡುಗ ಹುಡುಗಿಗೆ ವಂಚನೆ ಮಾಡಿದರೆ ಶಿಕ್ಷೆ ಆಗುತ್ತದೆ. ಆದ್ರೆ ಹುಡ್ಗಿ ಹುಡುಗನಿಗೆ ವಂಚಿಸಿದರೆ ಯಾಕೆ ಶಿಕ್ಷೆ ಇಲ್ಲಾ? ಆ ಹುಡ್ಗಿಗೆ ಶಿಕ್ಷೆ ಆಗಲಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾನೆ.

ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.