ಮುಂದಿನ ಶೈಕ್ಷಣಿಕ ವರ್ಷದಿಂದ  ನಿಯಮವು ಜಾರಿಗೆ ಬರಲಿರುವುದೆಂದು ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಜತೆಗೆ, ಶಿಕ್ಷಣ ಹಕ್ಕು ಕಾಯ್ದೆಯಲ್ಲೂ ವಿಕಲಚೇತನ ವಿದ್ಯಾರ್ಥಿಗಳ ವಯಸ್ಸನ್ನು 18 ವರ್ಷಕ್ಕೆ ವಿಸ್ತರಿಸಲಾಗುವುದು.

ನವದೆಹಲಿ (ಜ.03): ಕಳೆದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಟಟ್ಟ ವಿಕಲಚೇತನರ ಹಕ್ಕು ಮಸೂದೆಗೆ ನಿಯಮಗಳನ್ನು ರೂಪಿಸುತ್ತಿರುವ ಸರ್ಕಾರ ವಿಕಲಚೇತನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.5 ಮೀಸಲಾತಿ ನೀಡಲು ನಿರ್ಧರಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ನಿಯಮವು ಜಾರಿಗೆ ಬರಲಿರುವುದೆಂದು ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಜತೆಗೆ, ಶಿಕ್ಷಣ ಹಕ್ಕು ಕಾಯ್ದೆಯಲ್ಲೂ ವಿಕಲಚೇತನ ವಿದ್ಯಾರ್ಥಿಗಳ ವಯಸ್ಸನ್ನು 18 ವರ್ಷಕ್ಕೆ ವಿಸ್ತರಿಸಲಾಗುವುದು.

ಕಳೆದ ಚಳಿಗಾಲ ಅಧಿವೇಶನದಲ್ಲಿ ಈ ಮಸೂದೆಯನಮ್ನು ಅಂಗೀಕರಿಸಲಾಗಿದೆ. ಏಪ್ರಿಲ್ 14ರೊಳಗೆ ನಿಯಮಗಳನ್ನು ರೂಪಿಸಿ, ಆದಷ್ಟು ಶೀಘ್ರ ಮಸೂದೆಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದೆಂದು ಸಾಮಾಜಿಕ ನ್ಯಾಯ ಲಾಖೆ ಸಚಿವ ತಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)