ಬೀದಿನಾಯಿ ಬೆನ್ನಿಗೆ ಯಾರೋ ದೊಣ್ಣೆಯಿಂದ ಹೊಡೆದ ಪರಿಣಾಮ ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಮುರಿದು ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ನಡೆಯಲು ಬಾರದಂತಾಗಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲೇ ಬಿದ್ದು ನರಳುತ್ತಿತ್ತು.
ಕೊಪ್ಪಳ(ಅ.08): ಗಾಯಗೊಂಡಿದ್ದ ಬೀದಿನಾಯಿಗೆ ನಗರದ ಕಿಮ್ಸ್ ಕಾಲೇಜು ವೈದ್ಯರು ಮತ್ತು ಸಿಬ್ಬಂದಿ ಕೃತಕ ಕಾಲು ಜೋಡಿಸಿ ಮತ್ತೆ ಮೊದಲಿನ ಹಾಗೇ ನಡೆಯುವಂತೆ ಮಾಡಿದ್ದು, ಶನಿವಾರ ನಾಯಿ ಸಂಪೂರ್ಣವಾಗಿ ಮೊದಲಿನಂತೆ ಓಡಾಟ ಆರಂಭಿಸಿದೆ.
ಕಿಮ್ಸ್ ಸಿಬ್ಬಂದಿಯ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಬೀದಿನಾಯಿ ಬೆನ್ನಿಗೆ ಯಾರೋ ದೊಣ್ಣೆಯಿಂದ ಹೊಡೆದ ಪರಿಣಾಮ ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಮುರಿದು ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ನಡೆಯಲು ಬಾರದಂತಾಗಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲೇ ಬಿದ್ದು ನರಳುತ್ತಿತ್ತು. ಅದನ್ನು ನೋಡಿದ ಕಿಮ್ಸ್ ನಿರ್ದೇಶಕ ಶಂಕರ ಮಲಾಪುರೆ ಅವರು ಒಂದೆರಡು ದಿನ ಅದಕ್ಕೆ ಆಹಾರ ನೀಡಿ ಆರೈಕೆ ಮಾಡಿದ್ದರು. ಬಳಿಕ ಈ ವಿಚಾರವನ್ನು ಡಾ. ಗೌತಮ ದೇಶಪಾಂಡೆ ಮತ್ತು ಎಲೆಕ್ಟ್ರಿಶಿಯನ್ ತಿಮ್ಮಾರೆಡ್ಡಿ ಅವರೊಂದಿಗೆ ಚರ್ಚಿಸಿ ಅದಕ್ಕೆ ಏನಾದರೂ ಪರಿಹಾರ ಹುಡುಕಲು ಚಿಂತಿಸಿದರು. ಕೊನೆಗೆ ಅದಕ್ಕೆ ಕೃತಕ ಕಾಲು ಜೋಡಿಸಲು ನಿರ್ಧರಿಸಿ ಮೊದಲು ಅದರ ಗಾಯವಾಸಿ ಮಾಡಿದ್ದಾರೆ. ಬಳಿಕ ನಾಲ್ಕೈದು ದಿನಗಳ ಹಿಂದೆ ಅದಕ್ಕೆ ಕೃತ ಕಾಲು ಜೋಡಿಸಿದ್ದಾರೆ. ಕಾಲು ಜೋಡಿಸಿದ ಮೇಲೆ ನೋವಿನ ಭೀತಿಯಿಂದ ನಾಯಿಯು ಮೊದಲಿಗೆ ಓಡಾಡಲು ಹೆದರಿತ್ತು. ಆದರೆ, ಎರಡ್ಮೂರು ದಿನಗಳ ಬಳಿಕ ಮೊದಲಿನಂತೆ ಓಡಾಡುತ್ತಿದೆ.
