ಬಳ್ಳಾರಿ(ಸೆ.10): ಕಾಲೇಜು ಕೊಠಡಿಗಳೆಂದರೆ ಶುದ್ಧವಾಗಿ, ಕಲಿಯಲು ಒಳ್ಳೆ ವಾತಾವಣವಿರುತ್ತದೆ. ಆದರೆ ಬಳ್ಳಾರಿಯ ನಾರಾಯಣ ಪಿಯು ಕಾಲೇಜಿನ ಕೊಠಡಿಗಳನ್ನು ನೋಡಿದರೆ ಇದಕ್ಕೆ ತದ್ವಿರುದ್ಧ. ವಿದ್ಯಾರ್ಜನೆ ಮಾಡುವ ಕೊಠಡಿಯ ಗೋಡೆಗಳು ಅಶ್ಲೀಲ ಪದಗಳಿಂದ ರಾರಾಜಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ನಡೆದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾಲೇಜಿನ ತರಗತಿಯನ್ನ ಬಂದ್ ಮಾಡಿಸಲು ಕನ್ನಡಪರ ಹೋರಾಟಗಾರರು ಕಾಲೇಜಿನ ಕೊಠಡಿಗಳಿಗೆ ಹೋಗಿದ್ದಾರೆ. ಈ ವೇಳೆ ಕೊಠಡಿಯ ಗೋಡೆಗಳ ಮೇಲೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಶ್ಲೀಲ ಪದಗಳು ಬರೆದಿರುವುದು ಕಂಡುಬಂದಿದೆ. ಕೂಡಲೇ ಕನ್ನಡಪರ ಹೋರಾಟಗಾರರು ಕಾಲೇಜು ಅಡಳಿತ ಮಂಡಳಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಂಧಿನಗರ ಪೊಲೀಸರು ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ 'ನಿನ್ನೆಯಷ್ಟೇ ಈ ವಿಷಯ ಗಮನಕ್ಕೆ ಬಂದಿದೆ, ಅಶ್ಲೀಲ ಗೋಡೆ ಬರೆಹಗಳನ್ನು ಬರೆದ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ' ಎಂದು ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ.