ಉತ್ತರ ಕೊರಿಯಾದ ರಾಯಭಾರಿಯನ್ನು ಸೋಮವಾರ ಕರೆಸಿ ಕೊಂಡಿದೆ. ಉತ್ತರ ಕೊರಿಯಾದಲ್ಲಿನ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿ ಕೊಂಡಿರುವ ಮಲೇಷ್ಯಾ ಆ ದೇಶದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಕೌಲಲಾಂಪುರ (ಫೆ. 21): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲಸಹೋದರನ ಹತ್ಯೆ ಪ್ರಕರಣವು ಮಲೇಷ್ಯಾ ಮತ್ತು ಉತ್ತರ ಕೊರಿಯಾ ನಡುವಣ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.
ಉತ್ತರ ಕೊರಿಯಾದ ರಾಯಭಾರಿಯನ್ನು ಸೋಮವಾರ ಕರೆಸಿ ಕೊಂಡಿದೆ. ಉತ್ತರ ಕೊರಿಯಾದಲ್ಲಿನ ತನ್ನ ರಾಯಭಾರಿಯನ್ನು ವಾಪಸ್ ಕರೆಸಿ ಕೊಂಡಿರುವ ಮಲೇಷ್ಯಾ ಆ ದೇಶದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
‘ಮಲೇಷ್ಯಾದ ನೆಲದಲ್ಲಿ ನಿಗೂಢವಾಗಿ ಹತ್ಯೆ ನಡೆದಿದೆ. ಆದ್ದರಿಂದ ಅಲ್ಲಿನ ಸರ್ಕಾರವೇ ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಸಾವಿನ ಕಾರಣವನ್ನು ಪತ್ತೆ ಮಾಡಬೇಕು’ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
