ಸಿದ್ದರಾಮಯ್ಯ ಸರಕಾರದ ವಿರುದ್ಧ ಧರ್ಮ ಯುದ್ಧ ಸಾರಿದ ಸ್ವಾಮೀಜಿ

Dingaleshwara Swamiji to protest against seperate Lingayat Religion
Highlights

ಮುಖ್ಯಮಂತ್ರಿ ಇಡೀ ಸಮಾಜವನ್ನು ಬಲಿ ತೆಗೆದುಕೊಂಡು, ಸಮಾಜವನ್ನ ಒಡೆಯುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧರ್ಮ ಯುದ್ಧವನ್ನು ಮಾಡುತ್ತೆವೆ,' ವೀರಶೈವ ಪರಂಪರೆಯ ಬಾಳೇಹೊಸುರ ಮಠದ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.

ಹುಬ್ಬಳ್ಳಿ: 'ಮುಖ್ಯಮಂತ್ರಿ ಇಡೀ ಸಮಾಜವನ್ನು ಬಲಿ ತೆಗೆದುಕೊಂಡು, ಸಮಾಜವನ್ನ ಒಡೆಯುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧರ್ಮ ಯುದ್ಧವನ್ನು ಮಾಡುತ್ತೆವೆ,' ವೀರಶೈವ ಪರಂಪರೆಯ ಬಾಳೇಹೊಸುರ ಮಠದ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.

ರಾಜ್ಯ ಸರಕಾರ ತೆಗೆದುಕೊಂಡಿರುವ ಪ್ರತ್ಯೇಕ ಲಿಂಗಾಯತ ಧರ್ಮ ನಿರ್ಧಾರವನ್ನು ಹಿಂಪಡೆಯಲಿ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

ವೀರಶೈವ ಇತಿಹಾಸದ ಬಗ್ಗೆ ಅರಿಯದ ಏಳು ತಜ್ಞರ ಸಮಿತಿ ಪ್ರತ್ಯೇಕ ಧರ್ಮದ ಬಗ್ಗೆ ನಮ್ಮ ವಿರೋಧದ ನಡುವೆಯೂ ಲಿಂಗಾಯತ- ವೀರಶೈವ ಧರ್ಮ ಸ್ಥಾಪಿಸಲು ಶಿಪಾರಸು ಮಾಡಿದೆ. ಈ ತಜ್ಞರ ವರದಿ ಪಡೆಯುವ ಮೊದಲು ವೀರಶೈವ ದಾಖಲೆಗಳನ್ನ ನೋಡಿಲ್ಲ. ನಾಳೆ ಗದಗಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಗದಗನಲ್ಲಿ ಪ್ರತಿಭಟನೆ ನಡೆಸುತ್ತೆವೆ, ಎಂದಿದ್ದಾರೆ.

ಕೇವಲ ಕೆಲವು ಸಂಘ ಸಂಸ್ಥೆಗಳು ಹಾಗೂ ಕೆಲವೇ ಕೆಲವು ಸಚಿವರ ಮಾತು ಕೇಳಿಕೊಂಡು, ಮುಖ್ಯಮಂತ್ರಿಗಳು ಸಮಾಜವನ್ನ ಒಡೆಯಲು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ನಮ್ಮ ಸಮಾಜಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನ ಸೋಲಿಸುವುದೇ ನಮ್ಮ ಉದ್ದೇಶ, ಎಂದು ಹೇಳಿದ್ದಾರೆ.
 

loader