ಇವರೆಲ್ಲಾ ಧರ್ಮವನ್ನು ಉಪಯೋಗಿಸಿಕೊಂಡು ಭಯ ಸೃಷ್ಟಿ ಮಾಡುವ ಸಂಘಟನೆಗಳು, ನಮ್ಮದೇ ಸರಿ ಅವರದ್ದು ತಪ್ಪು ಎಂಬ ನಂಬಿಕೆಯಿಂದ ದೇಶ ಕಟ್ಟಲು ಹೊರಟರೆ ದೇಶದ ಭವಿಷ್ಯಕ್ಕೆ ಗಂಡಾಂತರವಿದೆ.
ಪಿಎಫ್ ಐ ನಿಷೇಧ ಕುರಿತ ಟ್ವೀಟ್'ಗೆ ದಿನೇಶ್ ಗುಂಡೂರಾವ್ಸ್ಪಷ್ಟನೆ
ಬೆಂಗಳೂರು(ನ.04): ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಟ್ವೀಟ್ ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಅವರ ಹೇಳಿಕೆಯ ಸಂಕ್ಷಿಪ್ತ ಭಾಗ
ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ಅದು ಧರ್ಮದ ಸಂಘಟನೆಗಳಾಗಿರಬಹುದು ಅಥವಾ ಸಿದ್ದಾಂತದ ಸಂಘಟನೆಗಳಾಗಿರಬಹುದು. ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಜರಂಗದಳ ನಿಷೇಧ ಮಾಡಬೇಕು ಎಂದು ಈ ಹಿಂದೆಯೇ ಹೇಳಿದ್ದೇನೆ.ಕಲ್ಲಪ್ಪ ಹಂಡಿಭಾಗ್ ಪ್ರಕರಣ ಮತ್ತು ಗೋರಕ್ಷಕರು ಸೇರಿ ಅನೇಕ ಜನರನ್ನು ಹತ್ಯೆ ಮಾಡಿದ್ದರು.
ಇವರೆಲ್ಲಾ ಧರ್ಮವನ್ನು ಉಪಯೋಗಿಸಿಕೊಂಡು ಭಯ ಸೃಷ್ಟಿ ಮಾಡುವ ಸಂಘಟನೆಗಳು, ನಮ್ಮದೇ ಸರಿ ಅವರದ್ದು ತಪ್ಪು ಎಂಬ ನಂಬಿಕೆಯಿಂದ ದೇಶ ಕಟ್ಟಲು ಹೊರಟರೆ ದೇಶದ ಭವಿಷ್ಯಕ್ಕೆ ಗಂಡಾಂತರವಿದೆ. ಇದು ನನ್ನ ವೈಯಕ್ತಿಕ ಮತ್ತು ಕಾಂಗ್ರೆಸ್ ಅಭಿಪ್ರಾಯ ಕೂಡಾ.
ದ್ವೇಷ ಹೆಚ್ಚಿಸಿ ಪ್ರಚೋದನೆ ಮಾಡುವಲ್ಲಿ ಸಂಘ ಪರಿವಾರದ ಸಂಘಟನೆಗಳು ಮತ್ತು ಅನೇಕ ಸಂಘಟನೆಗಳು ಕಾರಣಕರ್ತರಿದ್ದಾರೆ. ಹಿಂದೆ ಆರ್.ಎಸ್.ಎಸ್.ಅನ್ನು ನಿಷೇಧ ಮಾಡಲಾಗಿತ್ತು.ಅರ್.ಎಸ್.ಎಸ್ ಸಿದ್ಧಾಂತದ ಹಿನ್ನಲೆಯಲ್ಲಿಯೇ ಮಹಾತ್ಮಾ ಗಾಂಧಿ ಕೊಲೆಯಾಯಿತು. ಅದೇ ಪ್ರೇರಣಾ ಶಕ್ತಿಯಾಯಿತು. ಬಿಜೆಪಿ ಪರಿವರ್ತನಾ ಯಾತ್ರೆಗೆ ಅರ್ಥವೇ ಇಲ್ಲ. ಹತಾಶರಾಗಿ ಈಗ ಯಾತ್ರೆ ಯಶಸ್ವಿಗೆ ಯತ್ನಿಸುತ್ತಿದ್ದಾರೆ. ಅವರು ಯಾತ್ರೆ ಮಾಡುದಷ್ಟೂ ಕಾಂಗ್ರೆಸ್'ಗೆ ಅನುಕೂಲ. ನಾವೇನೂ ಅವರಿಗೆ ತೊಂದರೆ ಮಾಡಲ್ಲ'.
