ಕಾಂಗ್ರೆಸ್ ವಿರೋಧಿ ಅಲೆಗೂ ಕಾರಣವಾಗಿದ್ದರು ಗೌರಿ : ಮಟ್ಟು

First Published 29, Jan 2018, 3:19 PM IST
Dinesh Amin Mattu Talk About Gauri Lankesh
Highlights

ಇಂದು ಬೆಂಗಳೂರಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ದುರುಳರ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು, ಹಿರಿಯ ನಟ ಪ್ರಕಾಶ್ ರೈ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ದುರುಳರ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು, ಹಿರಿಯ ನಟ ಪ್ರಕಾಶ್ ರೈ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ದಿನೇಶ್ ಅಮಿನ್ ಮಟ್ಟು ಗೌರಿ,  ಲಂಕೇಶ್’ಗಿಂತಲೂ ಅಪಾರ ಹೆಸರು ಮಾಡಿದ್ದರು ಎಂದು ಹೇಳಿದ್ದಾರೆ. ಗುಬ್ಬಚ್ಚಿಯಂತಹ ಪುಟ್ಟ ಜೀವದಲ್ಲಿ ವಿಶಾಲ ಪ್ರೀತಿ ಇತ್ತು.  ಅಲ್ಲದೇ  ಆಕ್ಟಿವಿಸ್ಟ್ ಪತ್ರಕರ್ತೆಯಾಗಿದ್ದ ಅವರು ಕಾಂಗ್ರೆಸ್ ವಿರೋಧಿ ಅಲೆಗೂ ಕಾರಣವಾಗಿದ್ದರು ಎಂದು ಹೇಳಿದ್ದಾರೆ. ಇಂದು ಉಣ್ಣುವ ಅನ್ನ ವಿಷವಾಗಿದೆ. ನಮ್ಮ ನೆರಳನ್ನೇ ನಂಬದ ಕಾಲ ಬಂದಿದೆ ಎಂದು ಹೇಳಿದ್ದಾರೆ.

ಇನ್ನು ಹಿರಿಯ ಪ್ರಕಾಶ್ ರೈ ಮಾತನಾಡಿ ಕೆಲವು ದುರುಳರು, ರಾಕ್ಷಸರಿಗೆ ಒಂದು ವಿಷಯ ಅರ್ಥವಾಗುವುದಿಲ್ಲ. ಸಮಾಜದ ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರು ಮಡಿದಾಗ ಸಮಾಧಿ ಮಾಡುವುದಿಲ್ಲ ಎಂದಿದ್ದಾರೆ.

ಅಲ್ಲದೇ ನಾವು ಗೌರಿಯನ್ನು ಸಮಾಧಿ ಮಾಡಲಿಲ್ಲ ಬಿತ್ತಿದ್ದೇವೆ. ಕೆಲವು ಮರಣಗಳೇ ಹಾಗೇ ಸಾಯುವುದಿಲ್ಲ.  ದಲಿತ ಮರಣ ಕಂಡಾಗ ಜಿಗ್ನೇಶ್ ಮೇವಾನಿ ಧ್ವನಿಯಾದರು. ಗೌರಿಯ ಸಾವಿನ ನಂತರ ನಾನು ಧ್ವನಿಯಾದೆ. ಈ ಧ್ವನಿ ಇನ್ನೂ ಹೆಚ್ಚಾಗುತ್ತದೆ ಎಂದಿದ್ದಾರೆ.

loader