ಈ ವರ್ಷದ ಕಡೆಯ ದಿನದ ನಿಮ್ಮ ಭವಿಷ್ಯ ಹೇಗಿದೆ..?
ಮೇಷ : ಕಾರ್ಯ ಸಾಧನೆಗೆ ಪ್ರಶಂಸೆ, ಮಧ್ಯಾಹ್ನದೊಳಗೆ ಸಿಹಿ ಸುದ್ದಿ, ಮಾತಿನಿಂದ ಮನೆ ಕಟ್ಟುವ ಪ್ರಯತ್ನ ಬೇಡ, ಶ್ರೀಹರಿ ಧ್ಯಾನ ಮಾಡಿ
ವೃಷಭ : ದೈನಂದಿನ ಕೆಲಸದಲ್ಲಿ ಏರುಪೇರು, ಸಾಧಕರಿಗೆ ನಿರಾಸೆ, ಕಾಂಚನದಿಮದ ಕಾರ್ಯ ಸಿದ್ಧಿ, ರಾಮಾಯಣ ಉಪನ್ಯಾಸ ಕೇಳಿ
ಮಿಥುನ : ಉಪನ್ಯಾಸಕರಿಗೆ ಗೌರವ ಸಲ್ಲಿಕೆ, ಇಷ್ಟ ಮಿತ್ರರಿಂದ ಸಂತಸ, ಮಡದಿಯೊಂದಿಗೆ ಗಂಭೀರ ವಿಚಾರ ಚರ್ಚೆ, ಹರಿಹರೇಶ್ವರ ದರ್ಶನ ಮಾಡಿ
ಕಟಕ : ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ಪರಿವರ್ತನೆ, ನೀರಿನ ಅವಘಡ, ಶ್ರೀರಾಮ ಮಂತ್ರ ಜಪಿಸಿ
ಸಿಂಹ : ಕಾರ್ಯಭಾರ ಹೆಚ್ಚಾಗಲಿದೆ, ಜವಾಬ್ದಾರಿ ಕೆಲಸಗಳಲ್ಲಿ ವ್ಯತ್ಯಯ, ದೊಡ್ಡವರಿಂದ ಕಿರಿಕಿರಿ, ಶಿನಿಗೆ ರುದ್ರಾಭಿಷೇಕ ಮಾಡಿಸಿ
ಕನ್ಯಾ : ಪುರಾತನ ಗ್ರಂಥ ಸಂಗ್ರಹ, ಸಂಭವನೀಯ ಸಮಸ್ಯೆಗಳ ನಿವಾರಣೆ, ಭಾಗವತ ಪಾರಾಯಣ ಮಾಡಿ
ತುಲಾ : ವಿದೇಶವಿಂದ ಆಹ್ವಾನ, ಹಣಕಾಸಿನ ತೊಂದರೆಗೆ ಸ್ನೇಹಿತರ ನೆರವು, ಸಂಗಾತಿಯೊಡನೆ ಸುತ್ತಾಟ, ಶ್ರೀನಿವಾಸ ದರ್ಶನ ಮಾಡಿ
ವೃಶ್ಚಿಕ : ಬಹುದಿನದ ಬೇಡಿಕೆ ಈಡೇರಲಿದೆ, ಉತ್ತಮ ಕೃತಿಗಳ ಅಭ್ಯಾಸದ ಕಡೆ ಮನಸ್ಸು, ಕವಿ ಮನಸ್ಸುಗಳಿಗೆ ಆಹ್ಲಾದ, ವಾಗ್ದೇವಿ ಸ್ಮರಣೆ ಮಾಡಿ
ಧನಸ್ಸು : ಜಮೀನು ವಿವಾದ ಮುಂದೂಡಲ್ಪಡಲಿದೆ, ಬಂಧುಗಳ ಸಹಕಾರವೂ ಸಿಗಲಿದೆ, ವಿಶೇಷ ತಯಾರಿಯಲ್ಲಿ ಎಡವಟ್ಟು, ಗುರು ಸ್ತೋತ್ರ ಪಠಿಸಿ
ಮಕರ : ವಾತ್ಸಲ್ಯದ ಮಾತುಗಳಿಂದ ಬೇಸರ ದೂರವಾಗಲಿದೆ, ಹಿತೈಷಿಗಳೊಂದಿಗೆ ದೂರ ಪ್ರಯಾನ, ಹೊಸ ಪ್ರಯತ್ನಕ್ಕೆ ಹೊಸ ಸವಾಲು, ಕೃಷ್ಣ ಸ್ಮರಣೆ ಮಾಡಿ
ಕುಂಭ : ಪ್ರಯಾಣದಲ್ಲಿ ವ್ಯತ್ಯಯ, ಆರಕ್ಷಕರಿಗೆ ವಿಶೇಷ ಸಲಹೆ, ನೀವಂದುಕೊಂಡಂತೆ ನಡೆಯದು, ಗಾಯತ್ರೀ ಮಂತ್ರ ಪಠಣ ಮಾಡಿ
ಮೀನ : ಧಾರ್ಮಿಕ ಕಾರ್ಯಗಳಲ್ಲಿ ಶ್ರೇಯಸ್ಸು, ಪೂರ್ಣ ಪ್ರಮಾಣದಲ್ಲಿ ಸಹಾಯ ಮನೋಭಾವ, ಶಿವನಿಗೆ 11 ಬಿಲ್ವಪತ್ರೆ ಸಮರ್ಪಿಸಿ
