ಕುಂಭ ರಾಶಿಯವರಿಗಿಂದು ಕಾರ್ಯಸಾಧನೆಯಾಗಲಿದೆ – ನಿಮ್ಮ ರಾಶಿ ಹೇಗಿದೆ

ಮೇಷ : ಯಾವುದೇ ಧಕ್ಕೆ ಇಲ್ಲದೆ ಕಾರ್ಯ ನೆರವೇರಲಿದೆ, ಉತ್ತಮ ಬಾಂಧವ್ಯಕ್ಕಾಗಿ ಮಾತು ಕಡಿಮೆ ಮಾಡಬೇಕು, ತುಳಸಿ ಪ್ರದಕ್ಷಿಣೆ ಮಾಡಿ

ವೃಷಭ : ಮನೋಹರ ತಾಣಗಳಿಗೆ ಭೆಟಿ ನೀಡುವ ಬಯಕೆ, ವೃದ್ಧರಲ್ಲಿ ಆತಂಕ, ಅನ್ಯ ಚಿಂತೆ ಬೇಡ ಎಲ್ಲವೂ ಸುಗಮವಾಗಲಿದೆ, ಮಹಾಲಕ್ಷ್ಮಿ ಮಂತ್ರ ಪಠಿಸಿ

ಮಿಥುನ : ಆರೋಗ್ಯ ತೊಂದರೆಗೆ ಆಯುರ್ವೇದದ ಮೊರೆ ಹೋಗಿ, ತುಳಸಿ ತೀರ್ಥ ಸೇವಿಸಿ, ಭಸ್ಮ ಧಾರಣೆ ಮಾಡಿ

ಕಟಕ : ಕಳೆದ ವಸ್ತುವಿಗಾಗಿ ಹುಡುಕಾಟ, ಹೊರ ವ್ಯಕ್ತಿಗಳಿಂದ ಸಹಾಯ, ಬಂಧುಗಳೊಂದಿಗೆ ಕ್ಷೇತ್ರ ದರ್ಶನ

ಸಿಂಹ : ಶಾಲೆಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾದೀತು, ಸಹವಾಸ ದೋಷ ನಿಮ್ಮ ಮೇಲೆ ಪ್ರಭಾವ ಬೀರಲಿದೆ, ಶಾಂತಿ ಮಂತ್ರ ಕೇಳಿ

ಕನ್ಯಾ : ಸ್ನೇಹಿತರಿಂದ ಸಹಾಯ, ಕುಟುಂಬದ ಕಾರ್ಯಗಳಲ್ಲಿ ಆಸಕ್ತಿ, ವಿಜಯದ ದಿನ, ಆಂಜನೇಯ ಸ್ಮರಣೆ ಮಾಡಿ

ತುಲಾ : ವಿದ್ಯಾರ್ಥಿಗಳಿಗೆ ಹೊಸ ಯೋಜನೆ, ಕಾರ್ಮಿಕರಿಗೆ ವಸ್ತು ಲಾಭ, ಮನರಂಜನೆಯ ದಿನ, ತುಳಸಿ ದರ್ಶನ ಮಾಡಿ

ವೃಶ್ಚಿಕ : ಕೋರ್ಟು, ಕಚೇರಿ ಕೆಲಸದಲ್ಲಿ ಲಾಭ, ಧನ ಪ್ರಾಪ್ತಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸಿ

ಧನಸ್ಸು : ವಾರಾಂತ್ಯದಲ್ಲಿ ಜಯ, ಜೀವನದಲ್ಲಿ ಮುನ್ನಡೆ, ಮಹಾಲಕ್ಷ್ಮಿಗೆ ಹರಿದ್ರಾ ಅಭಿಷೇಕ ಮಾಡಿಸಿ

ಮಕರ : ಶಿಕ್ಷಣ ತರಬೇತುದಾರರಿಗೆ ಉಡುಗೊರೆ, ಸಮಾಜದಲ್ಲಿ ಪ್ರಶಂಸೆ, ದತ್ತಾತ್ರೇಯ ಸ್ಮರಣೆ ಮಾಡಿ

ಕುಂಭ : ಪ್ರಿಯ ಮಾತುಗಳಿಂದ ಕಾರ್ಯ ಸಾಧನೆ, ವ್ಯವಹಾರದಲ್ಲಿ ದ್ವಂದ್ವ ಮನಸ್ಸು, ವಿಷ್ಣು ಸಹಸ್ರನಾಮ ಪಠಿಸಿ

ಮೀನ : ಸಂತೋಷದ ದಿನ, ಮನಸಿಗೆ ಉಲ್ಲಾಸ, ಆದಿತ್ಯ ಹೃದಯ ಪಾರಾಯಣ ಮಾಡಿ