ದಿನ ಭವಿಷ್ಯ: ಸಿಂಹ ರಾಶಿಯವರಿಗಿಂದು ಕಂಡ ಕನಸು ನನಸಾಗುವ ದಿನ

news | Tuesday, March 13th, 2018
Suvarna Web Desk
Highlights

ಇಂದಿನ ದಿನ ಭವಿಷ್ಯ ಹೀಗಿದೆ ನೋಡಿ

ಇಂದಿನ ದಿನ ಭವಿಷ್ಯ ಹೀಗಿದೆ ನೋಡಿ

ಮೇಷ: ವಾಹನ ಸವಾರರು, ಕಂಪ್ಯೂಟರ್ ಕೆಲಸ ಮಾಡುವವರಿಗೆ ಸ್ವಲ್ಪ ನೆಮ್ಮದಿಯ ದಿನವಿದು. ತಂತ್ರಜ್ಞಾನಕ್ಕೆ ಮೆಚ್ಚುಗೆಯೂ ಸಿಗಲಿದೆ.

ವೃಷಭ: ಸುಖವೆಂದರೇನೆಂದು ತಿಳಿಯಲು ಇದು ಸೂಕ್ತ ದಿನವಾಗಿದೆ. ನಿಮಗೇ ಗೊತ್ತಿಲ್ಲದೇ ನಿಮ್ಮ ಎಲ್ಲಾ ದಾರಿಗಳು ತಂತಾನೆ ತೆರೆದುಕೊಳ್ಳಲಿದೆ.

ಮಿಥುನ: ಓದುವವರಿಗೆ ಬಿಡುವು ಇರುವುದಿಲ್ಲ. ಸ್ವಲ್ಪ ದಿನಗಳು ಕಷ್ಟ ಪಟ್ಟರೆ ಒಳ್ಳೆಯ ದಿನಗಳು ಬರಲಿವೆ. ಏಕಾಗ್ರತೆಗೆ ತಕ್ಕ ಫಲ ಸಿಗಲಿದೆ.

ಕಟಕ: ಏಕಪಕ್ಷೀಯ ಸ್ವಭಾವವು ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒತ್ತಡಕ್ಕೆ ಮಣಿಯದಿರಿ.

ಸಿಂಹ: ಇಂತಹ ದಿನಕ್ಕಾಗಿ ನೀವು ಸಾಕಷ್ಟು ದಿನಗಳಿಂದ ಕಾಯುತ್ತಲೇ ಬಂದಿದ್ದೀರಿ. ಆ ದಿನ ಇವತ್ತು ಬಂದಿದೆ. ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ.

ಕನ್ಯಾ: ನಿಮ್ಮ ಉದಾರ ಬುದ್ಧಿಯು ನಿಮಗೇ ಕುತ್ತಾಗಲಿದೆ. ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವವರು ಇಂದು ಹೆಚ್ಚಾಗಿದ್ದಾರೆ.

ತುಲಾ: ಬಂಧುಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ. ಮನೆಯಲ್ಲಿ ಮಂಗಳ ಕಾರ್ಯವು ನಡೆಯುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಖುಷಿ.

ವೃಶ್ಚಿಕ: ನಿಮ್ಮ ಗುರಿ ಸಾಧನೆಯತ್ತ ಮಾತ್ರ ನಿಮ್ಮ ಆಸಕ್ತಿ ಇದೆ. ಆಯವ್ಯಯದಲ್ಲಿ ಏರುಪೇರು. ಕ್ರಯ ವಿಕ್ರಯಗಳ ಮಾತುಕತೆಗಳು ನಡೆಯಲಿದೆ.

ಧನಸ್ಸು: ಕಾರಣವಿಲ್ಲದೆಯೇ ಮನಸ್ಸು ಚಂಚಲವಾಗಿದೆ. ಅದೇಕೆ ಹೀಗೇಂದು ತಿಳಿಯದೇ ಚಡಪಡಿಸಲಿದ್ದೀರಿ. ಧ್ಯಾನ-ಪ್ರಾಣಾಯಮ ಮಾಡಿ.

ಮಕರ: ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ ಭೇದಗಳಿಂದ ವೈಮನಸ್ಯಗಳು ಉಂಟಾಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.

ಕುಂಭ: ವಯೋಮಾನದ ತೊಂದರೆ ಬಾದಿಸುವುದು. ಅದಷ್ಟು ಹೊರಗಿನ ಆಹಾರವನ್ನು ನಿಷೇಧಿಸುವುದು ಉಚಿತ. ಗೆಳೆಯರ ಆಗಮನವಾಗಲಿದೆ.

ಮೀನಾ: ಗ್ರಹಗತಿಗಳೆಲ್ಲವೂ ನಿಮ್ಮ ಪರವಾಗಿಯೇ ಇವೆ. ಆದರೆ ನಿಮ್ಮಲ್ಲಿರುವ ದೋರಣೆಯ ಬುದ್ಧಿ ಮೀನ ಯನ್ನು ಸರಿಪಡಿಸಿಕೊಂಡರೆ ಒಳಿತಾಗುವುದು

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk