ಸಿಂಹ ರಾಶಿಯವರೆ ಎಚ್ಚರ... ಉಳಿದ ರಾಶಿ ಫಲ ಹೇಗಿದೆ..?
ಮೇಷ
ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ
ನಿಟ್ಟಿನಲ್ಲಿ ಬಳಸಿ. ಕಲಾವಿದರಿಗೆ ಒಳ್ಳೆಯ
ದಿನ. ಹಣಕಾಸಿನ ವಹಿವಾಟುಗಳಲ್ಲಿ ನಷ್ಟ
ವೃಷಭ
ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ ಇದಾಗಿದ್ದು
ಸ್ವಲ್ಪ ಪರಿಶ್ರಮ ಪಟ್ಟರೂ ಸಾಕು ಉತ್ತಮ
ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಮಿಥುನ
ನಿಮ್ಮ ಧೈರ್ಯದ ಮನಸ್ಥಿತಿಗೆ ಇಂದು
ಸರಿಯಾದ ದಿನ. ಮನಸ್ಸಿನ ತುಮುಲಗಳು
ದೂರಾಗಲಿವೆ. ಕಷ್ಟಗಳು ಮಾಯವಾಗಲಿದೆ.
ಕಟಕ
ಹೆಂಗಸರ ಮನೋಕ್ಷೋಬೆ ದೂರಾಗಲಿದೆ.
ಸಣ್ಣ ಪುಟ್ಟ ಕೆಲಸಗಳಿಗೂ ಪ್ರಶಂಸೆಗಳು
ಸಿಗಲಿವೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.
ಸಿಂಹ
ಚಳಿ-ಗಾಳಿಗಳಿಂದ ಶೀತದ ದೇಹವಾದ ನಿಮಗೆ
ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಆದಷ್ಟು
ಎಚ್ಚರವಹಿಸುವುದು ಸೂಕ್ತ. ಎಚ್ಚರದಿಂದಿರಿ.
ಕನ್ಯಾ
ಮೊಬೈಲ್‌ನ ಒಳಗೇ ಹೋಗಿರುತ್ತೀರಿ. ಅದು
ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ
ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.
ತುಲಾ
ಸಹೋದ್ಯೋಗಿಗಳ ಸೌಹಾರ್ದತೆಯು
ನಿಮ್ಮಲ್ಲಿ ಖುಷಿಯನ್ನು ದ್ವಿಗುಣಗೊಳಿಸುತ್ತದೆ.
ತುಲಾ ವ್ಯವಹಾರದಲ್ಲಿ ಹೆಚ್ಚು ಪ್ರಗತಿ ಸಿಗಲಿದೆ.
ವೃಶ್ಚಿಕ
ನಿಮಗೆ ಪೂರಕ ವಾತಾವರಣವಿರುತ್ತದೆ. ಈ
ದಿನ ಆಶಾವಾದಿಯಾಗಿರುವಿರಿ. ಹಣಕಾಸಿನ
ವಿಷಯದಲ್ಲಿ ಎಚ್ಚರವಾಗಿರಿ. ಸಾಲ ಕೊಡದಿರಿ.
ಧನಸ್ಸು
ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ
ಸಾಗುತ್ತವೆ. ನಿಮ್ಮ ಜೀವನ ಮತ್ತು ವೃತ್ತಿಗಳ
ಆಕಾಂಕ್ಷೆಗಳು ಏರುತ್ತಾ ಹೋಗುತ್ತವೆ.
ಮಕರ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಉದ್ಯೋಗಿಗಳಿಗೆ ಕೆಲಸದ ಒತ್ತಡ. ಖಾಸಗಿ
ಉದ್ಯೋಗಿಗಳಿಗೆ ಬಡ್ತಿ ಸಂಭವವಿದೆ.
ಕುಂಭ
ಶುಭ ವಾರ್ತೆ ಕೇಳುವಿರಿ. ಮನೆಯಲ್ಲಿ
ಹಬ್ಬದ ವಾತಾವರಣ. ಬಂಧುಗಳ ಭೇಟಿ.
ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ.
ಮೀನ
ಕ್ರಯ ವಿಕ್ರಯ ಕ್ಷೇತ್ರದವರಿಗೆ ಅನುಕೂಲ
ವಾತಾವರಣ. ಆರ್ಥಿಕ ವಿಷಯದಲ್ಲಿ
ಮೀನ ನೀವು ಊಹಿಸಿದಷ್ಟು ಪ್ರಗತಿ ಇರುವುದಿಲ್ಲ
