ನವದೆಹಲಿ(ಮಾ.16): ನ್ಯೂಜಿಲ್ಯಾಂಡ್ ಮಸೀದಿ ದಾಳಿಯನ್ನು ಖಂಡಿಸುವ ನೆಪದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಅನವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದಿದ್ದಾರೆ.

ವಿಶ್ವ ಶಾಂತಿಗೆ ಬುದ್ಧ, ಮಹಾವೀರ, ಮಾರ್ಟಿನ್ ಲೂಥರ್ ಕಿಂಗ್, ಮಹಾತ್ಮಾ ಗಾಂಧಿ ಅವರಂತ ನಾಯಕರು ಬೇಕೆ ಹೊರತು, ಹಿಟ್ಲರ್, ಮುಸುಲೋನಿ, ಅಥವಾ ನರೇಂದ್ರ ಮೋದಿ ಅವರಂತ ನಾಯಕರಲ್ಲ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ  49 ಮಂದಿ ಸಾವನ್ನಪ್ಪಿದ್ದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದನ್ನು ಬೆಂಬಲಿಸಿ ದಿಗ್ವಿಜಯ್ ಕೂಡ ಟ್ವೀಟ್ ಮಾಡಿದ್ದು, ಮೋದಿ ಅವರನ್ನು ಹಿಟ್ಲರ್ ಮತ್ತು ಮುಸುಲೋನಿಗೆ ಹೋಲಿಸಿದ್ದಾರೆ.