ಗ್ರಾಮೀಣ ಸಂಪರ್ಕಕ್ಕೆ ಡಿಜಿಟಲ್ ಇಂಡಿಯಾ ಪೂರಕ: ಪ್ರಧಾನಿ

Digital India for all, especially rural sector: PM
Highlights

ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ ಅಭಿಯಾನ

ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ

ಹೊಸ ಉದ್ಯೋಗ ಸೃಷ್ಟಿಗೆ ಡಿಜಿಟಲ್ ಇಂಡಿಯಾ ಪೂರಕ

ಉತ್ತಮ ಸಂಪರ್ಕಕ್ಕೆ ನಂದಿ ಹಾಡಿದ ಡಿಜಿಟಲ್ ಇಂಡಿಯಾ  
 

ನವದೆಹಲಿ(ಜೂ.15): ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ ಪ್ರಚಾರಾಂದೋಲನವನ್ನು ಆರಂಭಿಸಿದ್ದಾಗಿ  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಫಲಾನುಭವಿಗಳೊಂದಿಗೆ ಇಂದು ಸಂವಾದ ನಡೆಸಿದ ಅವರು,  ದೇಶಾದ್ಯಂತ ಇರುವ ಸಾಮಾನ್ಯ ಸೇವಾ ಕೇಂದ್ರಗಳು ಮಹತ್ವದ ವಿದ್ಯುನ್ಮಾನ ಸೇವೆಗಳನ್ನು ಒದಗಿಸುತ್ತಿದ್ದು, ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ನಾಗರಿಕರನ್ನು ಬಲವರ್ಧನೆಗೊಳಿಸಲಾಗುತ್ತಿದೆ ಎಂದರು.

ತಂತ್ರಜ್ಞಾನದಿಂದಾಗಿ ರೈಲು ಟಿಕೆಟ್‌ಗಳನ್ನು ಅಂತರ್ಜಾಲದಲ್ಲಿಯೇ ಬುಕ್ ಮಾಡಬಹುದಾಗಿದೆ. ಬಿಲ್ ಗಳನ್ನು ಆನ್‌ಲೈನ್ ನಲ್ಲಿಯೇ ಪಾವಸಬಹುದಾಗಿದೆ. ಇವೆಲ್ಲಾವುಗಳಿಂದ ಉತ್ತಮ ಸಂಪರ್ಕ ಏರ್ಪಟ್ಟಿದ್ದು, ಜನರಿಗೆ ತುಂಬಾ ಪ್ರಯೋಜನವಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ತಂತ್ರಜ್ಞಾನ ಸೌಲಭ್ಯಗಳು ಕೆಲವೇ ಆಯ್ದ ವ್ಯಕ್ತಿಗಳಿಗೆ ಸೀಮಿತಗೊಳಿಸಬಾರದು , ಸಮಾಜದ ಎಲ್ಲಾ ವರ್ಗದವರಿಗೂ ದೊರಕುವಂತಾಗಬೇಕು, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕವನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ಮೋದಿ ಭರವಸೆ ನೀಡಿದರು.

ಉತ್ತರ ಪ್ರದೇಶ, ಹರಿಯಾಣ , ರಾಜಸ್ತಾನ, ನಾಗಾಲ್ಯಾಂಡ್,  ರಾಜ್ಯಗಳ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಮೋದಿ, ಹೆಚ್ಚಿನ ಡಿಜಿಟಲ್ ಪಾವತಿ ಮೂಲಕ  ಗ್ರಾಮಗಳ ಮಟ್ಟದ ಉದ್ಯಮಗಳ ಸಮೂಹವನ್ನು ಸೃಷ್ಟಿಸುತ್ತಿದ್ದು, ಮಧ್ಯವರ್ತಿಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿಸಿದರು.

loader