ಪತ್ರದಲ್ಲಿ ಬಹಿರಂಗವಾಗಿ ಜೈಲಲ್ಲಿ ನಡೆಯುತ್ತಿರುವ ಗಾಂಜಾ ದಂಧೆಯ ಬಗ್ಗೆ ಬರೆದಿರುವ ಡಿಐಜಿ ರೂಪ ಅವರು, ಗಾಂಜಾ ಊಟದ ಪೊಟ್ಟಣಗಳಲ್ಲಿ ಸಪ್ಲೈ ಆಗುತ್ತೆ. ಸ್ವತಃ ಡಿಐಜಿ ಅವರು ಪರೀಕ್ಷೆ ನಡೆಸಿದಾಗ ಸತ್ಯ ಹೊರಬಿದ್ದಿದೆ. 25 ಕೈದಿಗಳಿಗೆ ಡ್ರಗ್ಸ್ ಟೆಸ್ಟ್ ಮಾಡಿಸಿದಾಗ 18 ಮಂದಿ ಮಾದಕ ದ್ರವ್ಯ ಸೇವಿಸಿರುವುದು ಪತ್ತೆಯಾಗಿದೆ. ಅಲ್ಲದೆ ಆ 18 ಕೈದಿಗಳ ವಿವರದ ಪ್ರತಿ ಸುವರ್ಣನ್ಯೂಸ್'ಗೆ ದೊರಕಿದೆ.

ಬೆಂಗಳೂರು(ಜು.12): ನಗರದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಈ ಬಗ್ಗೆ ಸ್ವತಃ ಕಾರಾಗೃಹ ಡಿಐಜಿ ರೂಪ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದು, ಪತ್ರದ ಪ್ರತಿ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

'ಕೇಂದ್ರ ಕಾರಾಗೃಹವೂ ಸಂಪೂರ್ಣವಾಗಿ ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಕೈದಿಗಳು ನಡೆದಿದ್ದೇ ಆಟ. ಗಾಂಜಾನೂ ಸೇದುತ್ತಾರೆ, ಮಹಿಳೆಯರಿಗೆ ಟಾರ್ಚರ್ ಕೊಡ್ತಾರೆ. ವಿವಿಐಪಿ ಖೈದಿಗಳಿಗೆ ಜೈಲಲ್ಲೇ ಮನೆಗಿಂತ ಚೆನ್ನಾಗಿ ಸೌಲಭ್ಯ ನೀಡಲಾಗುತ್ತಿದೆ.

ಪತ್ರದಲ್ಲಿ ಬಹಿರಂಗವಾಗಿ ಜೈಲಲ್ಲಿ ನಡೆಯುತ್ತಿರುವ ಗಾಂಜಾ ದಂಧೆಯ ಬಗ್ಗೆ ಬರೆದಿರುವ ಡಿಐಜಿ ರೂಪ ಅವರು, ಗಾಂಜಾ ಊಟದ ಪೊಟ್ಟಣಗಳಲ್ಲಿ ಸಪ್ಲೈ ಆಗುತ್ತೆ. ಸ್ವತಃ ಡಿಐಜಿ ಅವರು ಪರೀಕ್ಷೆ ನಡೆಸಿದಾಗ ಸತ್ಯ ಹೊರಬಿದ್ದಿದೆ. 25 ಕೈದಿಗಳಿಗೆ ಡ್ರಗ್ಸ್ ಟೆಸ್ಟ್ ಮಾಡಿಸಿದಾಗ 18 ಮಂದಿ ಮಾದಕ ದ್ರವ್ಯ ಸೇವಿಸಿರುವುದು ಪತ್ತೆಯಾಗಿದೆ. ಅಲ್ಲದೆ ಆ 18 ಕೈದಿಗಳ ಹೆಸರನ್ನು ನಮೂದಿಸಲಾಗಿದೆ.

ಕಾರಾಗೃಹದಲ್ಲಿಮಹಿಳೆಯರಿಗೆ, ವೈದ್ಯರಿಗಿಲ್ಲ ರಕ್ಷಣೆ

ಕೇಂದ್ರ ಕಾರಗೃಹದಲ್ಲಿ ಚಿಕಿತ್ಸೆ ನೀಡುವ ನರ್ಸ್'ಗಳಿಗೆ ಕೈದಿಗಳಿಂದ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಕೆಲವು ಕೈದಿಗಳು ವ್ಯದ್ಯರ ಬಳಿ ಬಂದು ತಮಗೆ ಅನುಕೂಲವಾಗುವಂತೆ ವರದಿ ಕೊಡಿ ಎಂದು ಒತ್ತಡ ಹಾಕುತ್ತಾರೆ. ತಾವು ಹೇಳಿದಂತೆ ಮಾಡದಿದ್ದರೆ ಜೀವ ಬೆದರಿಕೆ ಹಾಕುತ್ತಾರೆ. ನಿದ್ರೆ ಮಾತ್ರೆ ಕೊಡುವಂತೆ ಸ್ಟಾಫ್ ನರ್ಸ್'ಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆಸ್ಪತ್ರೆಯ ಕೆಲವು ಕೊಠಡಿಗಳನ್ನು ಕೂಡ ಆಕ್ರಮಿಸಿಕೊಳ್ಳಲಾಗಿದೆ'. ಇನ್ನು ಮುಂದೆ ತಮಗೆ ಈ ಕಾರಾಗೃಹದಲ್ಲಿ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ತಮ್ಮನ್ನು ಮಾತೃ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಬೇಕೆಂದು ವ್ಯದ್ಯರು ಹಾಗೂ ವ್ಯದ್ಯ ಸಿಬ್ಬಂದಿಯನ್ನೊಳಗೊಂಡ 10 ಮಂದಿ ಡಿಐಜಿ ರೂಪ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ರೂಪ ಅವರು ಡಿಐಜಿ ಅವರಿಗೆ ಬರೆದಿರುವ ಪತ್ರದೊಂದಿಗೆ ಲಗತ್ತಿಸಿದ್ದಾರೆ.

ಶಶಿಕಲಾ,ತೆಲಗಿಗೆ ರಾಜಾತಿಥ್ಯ

ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಶಶಿಕಲಾ ಅವರ ಕೋಣೆಗೆ ವಿಶೇಷ ಸೌಲಭ್ಯವನ್ನು ಒದಗಿಸಿ ಕಾರಾಗೃಹ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ.ಈ ಬಗ್ಗೆ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳಲಾಗಿಲ್ಲ ಜೊತೆಗೆ ಇದರ ಹಿಂದೆ ಹಣದ ವಾಸನೆ ಹರಿದಾಡುತ್ತಿದೆ.

ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ ತೆಲಗಿಗೂ ರಾಜಾತಿಥ್ಯ ನೀಡಲಾಗುತ್ತಿದೆ. ಆತ ಆರೋಗ್ಯವಾಗಿದ್ದರೂ ಈತನ ಸೇವೆ ಮಾಡಲು ಮೂರ್ನಾಲ್ಕು ಮಂದಿ ಸೇವಕರಿದ್ದಾರೆ. ಅಲ್ಲದೆ ಈ ವಿಷಯ ಜೈಲಿನ ಅಧೀಕ್ಷಕರಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿರುವುದಿಲ್ಲ.ಈ ಕೂಡಲೇ ಈ ಅಕ್ರಮದಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ತಮ್ಮಪತ್ರದಲ್ಲಿ ತಿಳಿಸಿದ್ದಾರೆ.