ಜಮೀರ್ ಅಹಮದ್ - ಎಚ್ಡಿಕೆ ನಡುವೆ ನಿಲ್ಲದ ಹಗ್ಗ ಜಗ್ಗಾಟ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 9:47 AM IST
Differences Continues Among HDK And Zameer Ahmed Over Anna Bhagya
Highlights

ಸಚಿವ ಜಮೀರ್ ಅಹಮದ್ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಅನ್ನ ಭಾಗ್ಯ ಅಕ್ಕಿ ನೀಡುವ   ಪ್ರಮಾಣದ ಸಂಬಂಧ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಿದೆ. 

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ  ಪ್ರಮಾಣದ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ನಡುವಿನ ಭಿನ್ನ ಧೋರಣೆ ಮುಂದುವರಿದಿದ್ದು, ಗೊಂದಲ ಪರಿಸ್ಥಿತಿ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿ ನೀಡುವುದಾಗಿ ಆಹಾರ ಸಚಿವ ಜಮೀರ್ ಅಹ್ಮದ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರೆ, ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಎಷ್ಟು ಅಕ್ಕಿ ನೀಡಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಏಳು ಕೆ.ಜಿ. ಅಕ್ಕಿ ವಿತರಣೆಗೆ ಜಮೀರ್ ಅಹ್ಮದ್ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ನಿಲುವಿಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಮಂಗಳವಾರವಷ್ಟೇ ಮಾಧ್ಯಮದವರ ಮುಂದೆ ಅಕ್ಕಿ ಪ್ರಮಾಣ ಇಳಿಸುವ ಕುರಿತು ಮುಖ್ಯಮಂತ್ರಿ ತಮ್ಮೊಂದಿಗೆ ಆಗಲಿ, ಇಲಾಖೆಯ ಅಧಿಕಾರಿಗಳೊಂದಿಗೆ ಆಗಲಿ ಚರ್ಚೆ ಮಾಡಿಲ್ಲ.
 
ಯಾವುದೇ ಮಾಹಿತಿ ಇಲ್ಲದ ಕಾರಣ ಮೊದಲಿನಂತೆ ಏಳು ಕೆಜಿ ಅಕ್ಕಿ ನೀಡಲಾಗುವುದು ಎಂದಿದ್ದರು. ಬುಧವಾರ ತಮ್ಮ ಆಪ್ತರ ಬಳಿ ಮತ್ತೆ ಇದನ್ನೇ ಪುನರುಚ್ಚರಿಸಿರುವ ಜಮೀರ್ ಅಹ್ಮದ್, ಅಧಿವೇಶನದಲ್ಲಿ ಮಾತನಾಡುವಾಗ  ಏಳು ಕೆ.ಜಿ. ಅಕ್ಕಿ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ಅದೇ ರೀತಿಯಾಗಿ ಅಕ್ಕಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆಯಾದಲ್ಲಿ ಮುಂದೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಏಳು ಕೆ.ಜಿ ಅಕ್ಕಿಯನ್ನು ನೀಡಲಾಗುವುದು ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಜಮೀರ್ ಅಹ್ಮದ್ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಕ್ಕಿ ಎಷ್ಟು ನೀಡಬೇಕು ಎಂಬುದರ ಕುರಿತು ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಜಮೀರ್ ಅಹ್ಮದ್ ಅವರು ಏಳು ಕೆ.ಜಿ. ಅಕ್ಕಿ ನೀಡುವ ಬಗ್ಗೆ ಹೇಳಿಕೆ ನೀಡಿರಬಹುದು. ಆದರೆ, ಅಧಿಕಾರಿಗಳ ಜತೆ ಚರ್ಚಿಸಿ ನಾನು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು. 

loader