ತುಮಕೂರು (ಮಾ. 23):  ಜಿಲ್ಲಾ ಬಿಜೆಪಿಯಲ್ಲಿ ಮತ್ತೆ  ಭಿನ್ನಮತ ಮುಂದುವರೆದಿದೆ. ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣರ ನಡುವೆ ಭಿನ್ನಮತ ಸ್ಪೋಟಗೊಂಡಿದೆ. 

ಶ್ರೀದೇವಿ ವೈದ್ಯಕೀಯ ಕಾಲೇಜು  ಮೈದಾನದಲ್ಲಿ ನಡೆಯುತ್ತಿದ್ದ ಬೃಹತ್ ಸಮಾವೇಶ ನನಗೆ ಆಹ್ವಾನ ನೀಡಿಲ್ಲ.  ಹಾಗಾಗಿ ಸಮಾವೇಶಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ‌ ಸೊಗಡು ಶಿವಣ್ಣ ಹೇಳಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಈ ಸಮಾವೇಶದಲ್ಲಿ  ಭಾಗಿಯಾಗಿದ್ದಾರೆ. 

ಕಳೆದ ಶನಿವಾರ ನೆಪಮಾತ್ರಕ್ಕೆ  ಒಂದಾದ ಸೊಗಡು ಶಿವಣ್ಣ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ವೀರಶೈವ ಸಮಾಜದ ವೇದಿಕೆಯಲ್ಲಿ ಪರಸ್ಪರ ಹಾರಹಾಕಿಕೊಂಡು ನಾವು ಒಟ್ಟಾಗಿದ್ದೇವೆ ಎಂದು ಹೇಳಿದ್ದರು.  ಈಗ ಮತ್ತೆ ಒಡಕು ಮೂಡಿದೆ. ಕಾರ್ಯಕ್ರಮಕ್ಕೆ ಹಾಜರಾಗದೇ  ಸೊಗಡು ಶಿವಣ್ಣ ಅಸಮಾಧಾನ ಹೊರಹಾಕಿದ್ದಾರೆ.