ಗೌಡ್ರ ಕುಟುಂಬಕ್ಕೆ ಕಿಚ್ಚು ಹಚ್ಚಿದ್ರಾ ಪ್ರಗತಿಪರರು?

First Published 29, Mar 2018, 11:34 AM IST
Difference of Opinion in Deve Gowda Family
Highlights

ಚುನಾವಣೆ ಸಮೀಪಿಸುತ್ತಿದ್ದಂತೆ  ಗೌಡರ ಕುಟುಂಬದಲ್ಲಿ  ಅಸಮಾಧಾನ ಭುಗಿಲೆದ್ದಿದೆ.  ಕುಮಾರಸ್ವಾಮಿ ಮತ್ತು ದೇವೇಗೌಡರ ಮಧ್ಯೆ  ಅಸಮಾಧಾನ ಎದ್ದಿದೆ. 

ಬೆಂಗಳೂರು (ಮಾ. 29): ಚುನಾವಣೆ ಸಮೀಪಿಸುತ್ತಿದ್ದಂತೆ  ಗೌಡರ ಕುಟುಂಬದಲ್ಲಿ  ಅಸಮಾಧಾನ ಭುಗಿಲೆದ್ದಿದೆ.  ಕುಮಾರಸ್ವಾಮಿ ಮತ್ತು ದೇವೇಗೌಡರ ಮಧ್ಯೆ  ಅಸಮಾಧಾನ ಎದ್ದಿದೆ. 

ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಿ ಅಂತಾ  ಪ್ರಗತಿಪರ ಚಿಂತಕರು ಮನವಿ ಮಾಡಿದ್ದರು.  ಇದರ ಬೆನ್ನಲ್ಲೇ ಕಾಂಗ್ರೆಸ್ ಜೊತೆ ಮೈತ್ರಿ ಗೆ ಸಿದ್ದ ಎಂದು ಗೌಡರು ಹೇಳಿದ್ದರು. ಇದು  ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿತ್ತು. ಗೌಡರ ಹೇಳಿಕೆ ಮಾದ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ  ಎಚ್’ಡಿಕೆ ಕರೆ ಮಾಡಿ ಮಾತನಾಡಿದ್ದರು.

ಚುನಾವಣಾ ಹೊಸ್ತಿಲಲ್ಲಿ ಇಂತಹಾ ಹೇಳಿಕೆಗಳು ಸಲ್ಲದು ಅಂತಾ ಅಸಮಾಧಾನ ಎಚ್’ಡಿಕೆ ಅಸಮಾಧಾನ ಹೊರ ಹಾಕಿದ್ದರು.  ಇದರ ಬೆನ್ನಲ್ಲೇ ತುರ್ತು ಸುದ್ದಿಗೋಷ್ಟಿ ಕರೆದು ಡ್ಯಾಮೇಜ್ ಕಂಟ್ರೋಲ್’ಗೆ  ಗೌಡರು ಮುಂದಾಗಿದ್ದರು. ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂತಾ ದೇವೇಗೌಡರು  ಸಮಜಾಯಿಷಿ ನೀಡಿದ್ದಾರೆ. 

loader