ಡೀಸೆಲ್‌ ಬೆಲೆಯು ಪೆಟ್ರೋಲ್‌ ದರಕ್ಕಿಂತಲೂ ಸುಮಾರು 5 ರುಪಾಯಿಯಿಂದ 7 ರು.ವರೆಗೂ ಕಡಿಮೆಯಿದೆ. ಆದರೆ, ಬಿಜು ಜನತಾದಳ ಪಕ್ಷದ ಆಡಳಿತವಿರುವ ಒಡಿಶಾದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆಯೇ ದುಬಾರಿಯಾಗಿದೆ.

ಭುವನೇಶ್ವರ: ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಡೀಸೆಲ್‌ ಬೆಲೆಯು ಪೆಟ್ರೋಲ್‌ ದರಕ್ಕಿಂತಲೂ ಸುಮಾರು 5 ರುಪಾಯಿಯಿಂದ 7 ರು.ವರೆಗೂ ಕಡಿಮೆಯಿದೆ. ಆದರೆ, ಬಿಜು ಜನತಾದಳ ಪಕ್ಷದ ಆಡಳಿತವಿರುವ ಒಡಿಶಾದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆಯೇ ದುಬಾರಿಯಾಗಿದೆ. ಇಲ್ಲಿ ಪೆಟ್ರೋಲ್‌ ದರ 80.57 ರು. ಇದ್ದರೆ, ಲೀಟರ್‌ ಡೀಸೆಲ್‌ ಅನ್ನು 80.69 ರು.ಗೆ ಖರೀದಿಸಬೇಕು. ಈ ಮೂಲಕ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆ 12 ಪೈಸೆ ಹೆಚ್ಚು.

ಇದಕ್ಕೆ ಕೇಂದ್ರ ಸರ್ಕಾರದ ತಪ್ಪು ನಿಯಮವೇ ಕಾರಣ ಎಂದು ಒಡಿಶಾ ಆಡಳಿತಾರೂಢ ಬಿಜು ಜನತಾದಳ ಮತ್ತು ವಿಪಕ್ಷ ಕಾಂಗ್ರೆಸ್‌ ಆರೋಪಿಸಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ಕಲ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಜಯ್‌ ಲಾಠ್‌, ‘ಇತರೆ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ವಿಭಿನ್ನವಾಗಿದೆ. ಆದರೆ, ಒಡಿಶಾದಲ್ಲಿ ಮಾತ್ರವೇ ಇವೆರಡರ ಮೇಲೆ ಶೇ.26ರಷ್ಟುಏಕರೂಪದ ವ್ಯಾಟ್‌ನಿಂದ, ಪೆಟ್ರೋಲ್‌ಗಿಂತ ಡೀಸೆಲ್‌ ದುಬಾರಿಯಾಗಿದೆ’ ಎಂದಿದ್ದಾರೆ.