ಇದೀಗ ಮಾಲ್ದಾರೆ ಸುತ್ತಮುತ್ತಲಿನ ಇತರೆ ಹಾಡಿವಾಸಿಗಳು ಬೀದಿಗಳಿದು ದಿಡ್ಡಳ್ಳಿಯವರಿಗಿಂದ ನಮಗೆ ಮೊದಲು ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿ ದಿನೇ ದಿನೇ ಗಿರಿಜನರ ಒಂದಲ್ಲಾ ಒಂದು ಸಮಸ್ಯೆಗಳು ಬೆಳಕಿಗೆ ಬರ್ತಿದೆ. ಡಿಸೆಂಬರ್ 7ರಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ದಿಡ್ಡಳ್ಳಿ ಗಿರಿಜನರ 16 ದಿನ ಸತತ ಹೋರಾಟ ಪರಿಣಾಮ ಸರ್ಕಾರ ಒಂದು ಕೋಟಿಯೇನೋ ನೀಡಿದೆ. ಇದೀಗ ಮಾಲ್ದಾರೆ ಸುತ್ತಮುತ್ತಲಿನ ಇತರೆ ಹಾಡಿವಾಸಿಗಳು ಬೀದಿಗಳಿದು ದಿಡ್ಡಳ್ಳಿಯವರಿಗಿಂದ ನಮಗೆ ಮೊದಲು ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿದ್ದಾರೆ.
ಇವರು ಕೊಡಗಿನ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯ್ತಿಯಲ್ಲಿರೋ ಹಾಡಿಗಳ ಜನ . ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ದಿಡ್ಡಳ್ಳಿಯ ನಿರಾಶ್ರಿತರು ಹಕ್ಕು ಪತ್ರಕ್ಕಾಗಿ ಹೋರಾಟ ಮಾಡಿದವರಿಗೆ 1 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಮಾಲ್ದಾರೆ, ತಟ್ಟಳ್ಳಿ, ಬಾಡಗ ಬಾಣಂಗಾಲ ಸೇರಿದಂತೆ ಹಾಡಿಗಳಲ್ಲಿರುವ ವಾಸಿಗಳು ಮತ್ತು ಹಿಂದುಳಿದ ವರ್ಗದವರು ಮಾಲ್ದಾರೆ ಗ್ರಾಮ ಪಂಚಾಯ್ತಿಯಲ್ಲಿ 680 ಮಂದಿ ಹಕ್ಕು ಪತ್ರಕ್ಕಾಗಿ 2013ರಲ್ಲೇ ಅರ್ಜಿ ಸಲ್ಲಿಸಿದ್ದರು. ಆದರೆ ಈವರೆಗೆ ಹಕ್ಕುಪತ್ರ ಸಿಗದ ಹಿನ್ನಲೆಯಲ್ಲಿ ತಮಗೆ ಮೊದಲ ಆದ್ಯತೆ ನೀಡಿ ಬಳಿಕ ದಿಡ್ಡಳ್ಳಿಯವರಿಗೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ದಿಡ್ಡಳ್ಳಿ ನಂತ್ರ ಸರ್ಕಾರಕ್ಕೆ ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಡಿ ವಾಸಿಗಳ ಹಕ್ಕು ಪತ್ರ ಹೋರಾಟ ಮತ್ತೊಂದು ಸವಾಲಾಗಿದೆ. ಇದನ್ನು ಸರ್ಕಾರ ಹೇಗೆ ನಿಭಾಯಿಸುತ್ತೋ ಕಾದು ನೋಡಬೇಕು.
