ಬಿಜೆಪಿಗೆ 35 ಕೋಟಿ ಕೊಟ್ಟು ಲಂಡನ್ ಗೆ ಹಾರಿದ್ದರಾ ಮಲ್ಯ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 2:32 PM IST
Did Vijay Mallya Donate Rs 35 Crore To BJP Before Leaving India Viral Check
Highlights

ಭಾರತದ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿರುವ ವಿಜಯ್ ಮಲ್ಯ ದೇಶವನ್ನು ಬಿಟ್ಟು ಪರಾರಿಯಾಗಿದ್ದು, ಅದಕ್ಕೂ ಮೋದಲು ಬಿಜೆಪಿಗೆ ಕೋಟ್ಯಂತರ ರು. ಹಣವನ್ನು ಪಾವತಿ ಮಾಡಿದ್ದರು ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. 

ನವದೆಹಲಿ : ಉದ್ಯಮಿ ವಿಜಯ್ ಮಲ್ಯ ಭಾರತದ ಬ್ಯಾಂಕುಗಳಿಗೆ 9000 ಕೋಟಿ ವಂಚಿಸಿ ಲಂಡನ್‌ಗೆ ಹಾರುವ ಮುನ್ನ ಮಲ್ಯ ಸಹಿ ಇರುವ 35 ಕೋಟಿ ರು. ಚೆಕ್ ಅನ್ನು ಭಾರತೀಯ ಜನ ಪಕ್ಷಕ್ಕೆ ಹಸ್ತಾಂತರಿಸಲಾಗಿದೆ ಎಂಬ ಸಂದೇಶವಿರುವ ಚೆಕ್‌ನ ಫೋಟೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್  ಆಗಿದೆ. 

ಆದರೆ ನಿಜಕ್ಕೂ ವಿಜಯ್ ಮಲ್ಯ ಲಂಡನ್‌ಗೆ ಹಾರುವ ಮೊದಲು ಬಿಜೆಪಿಗೆ 35 ಕೋಟಿ ರು. ಚೆಕ್ ಮೂಲಕ ನೀಡಿದ್ದರೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದಕ್ಕೆ ವೈರಲ್ ಆಗಿರುವ ಚೆಕ್‌ನಲ್ಲಿಯೇ ಹಲವಾರು ಸಾಕ್ಷ್ಯಗಳು ಲಭಿಸಿವೆ. ವಾಸ್ತವವಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಈ ಚೆಕ್ ನಕಲಿಯಾಗಿದ್ದು, ಅದು ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದ್ದಲ್ಲ. 

ಮೊದಲನೆಯ– ದಾಗಿ ಚೆಕ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಎಂದು ಬರೆಯುವ ಬದಲಿಗೆ ‘ಭಾರತೀಯ ಜನ್ತಾ ಪಾರ್ಟಿ’ ಎಂದು ಬರೆಯಲಾಗಿದೆ. ಎರಡನೆಯದಾಗಿ ಚೆಕ್ ಮೇಲಿರುವ ವಿಜಯ್ ಮಲ್ಯ ಹೆಸರಿನ ಸಹಿ ವಿಜಯ್ ಮಲ್ಯ ಅವರದ್ದಲ್ಲ. ವಿಜಯಲ ಮಲ್ಯ ಅವರ ಸಹಿ ಹಾಗೂ ಈ ಚೆಕ್ ಮೇಲಿನ ಸಹಿ ಗಮನಿಸಿದಾಗ ಅದೊಂದು ನಕಲಿ ಸಹಿ ಎಂಬುದು ಸ್ಪಷ್ಟವಾಗುತ್ತದೆ. 

ಮೂರನೆಯ– ದಾಗಿ ಚೆಕ್ ಮೇಲೆ 2016 ನವೆಂಬರ್ 8 ಎಂದು ಬರೆಯಲಾಗಿದೆ. ಆದರೆ ವಿಜಯ್ ಮಲ್ಯ ಭಾರತವನ್ನು ಬಿಟ್ಟಿದ್ದು 2016ರ ಮಾರ್ಚ್ 2 ರಂದು. ಹಾಗೂ 35,00,00,000 ಎಂದು ಬರೆದ ನಂತರದಲ್ಲಿ ಕೊನೆ ಎಂದು ತಿಳಿಸುವ ಈ ‘/-’ ಚಿಹ್ನೆ ಅದರಲ್ಲಿ ಇಲ್ಲ. ಈ ಹಿಂದೆ ಕೂಡ ಇದೇ ಚೆಕ್ ಅನ್ನು ಬಳಸಿಕೊಂಡು ನೀರವ್ ಮೋದಿ ಕಾಂಗ್ರೆಸ್ ಪಕ್ಷಕ್ಕೆ 98 ಕೋಟಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

(ವೈರಲ್ ಚೆಕ್)

loader