ಕೈಲಾಸ ಯಾತ್ರೆ ವೇಳೆ ರಾಹುಲ್‌ರಿಂದ ಮಾಂಸಾಹಾರ ಸೇವನೆ?
ಮಾನ ಸರೋವರ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ನೇಪಾಳಕ್ಕೆ ತಲುಪಿದ್ದ ರಾಹುಲ್, ಕಾಠ್ಮಂಡುವಿನ ಹೋಟೆಲೊಂದರಲ್ಲಿ ಚಿಕನ್ ಕುರ್ಕುರೆ ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಬಹುದಿನಗಳ ಕನಸಾದ ಕೈಲಾಸ ಮಾನಸ ಸರೋವರ ಯಾತ್ರೆ ವಿವಾದಕ್ಕೆ ಗುರಿಯಾಗಿದೆ. ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ನೇಪಾಳಕ್ಕೆ ತಲುಪಿದ್ದ ರಾಹುಲ್, ಕಾಠ್ಮಂಡುವಿನ ಹೋಟೆಲೊಂದರಲ್ಲಿ ಚಿಕನ್ ಕುರ್ಕುರೆ ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಯಾತ್ರೆಯ ಉದ್ದೇಶದಿಂದ ರಾಹುಲ್ ಶುಕ್ರವಾರ ಕಾಠ್ಮಂಡು ತಲುಪಿದ್ದಾರೆ. ಅಲ್ಲಿ ಅವರು ಸಾಮಾನ್ಯ ವ್ಯಕ್ತಿಯಂತೆ ರೆಸ್ಟೋರೆಂಟ್‌ಗೆ ತೆರಳಿ, ತಿಂಡಿ-ತಿನಿಸುಗಳನ್ನು ಸೇವಿಸಿದರು. ಈ ವೇಳೆ ಅವರು ಚಿಕನ್ ಕುರ್ಕುರೆ ಇಷ್ಟಪಟ್ಟು ತಿಂದರು ಎಂದು ರೆಸ್ಟೋರೆಂಟ್‌ನ ವೇಟರ್ ಹೇಳಿದ್ದಾಗಿ ಕೆಲವೆಡೆ ವರದಿಯಾಗಿತ್ತು. ವಿವಾದವಾಗುತ್ತಿದ್ದಂತೆ ಎಚ್ಚೆತ್ತ ರೆಸ್ಟೋರೆಂಟ್, ರಾಹುಲ್ ಶುದ್ಧ ಸಸ್ಯಾಹಾರಿ ತಿನಿಸುಗಳನ್ನಷ್ಟೇ ಆರ್ಡರ್ ಮಾಡಿದ್ದರು ಎಂದು ಸ್ಪಷ್ಟಪಡಿಸಿದೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ತಿನಿಸುಗಳ ಪ್ಲೇಟ್‌ಗಳ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಆದರೆ, ಕಾಂಗ್ರೆಸ್ ನಾಯಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.