ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ನನಗೆ ತೊಡಿಸಿದ್ದ ವೇಷ ಟಿಪ್ಪು ಸುಲ್ತಾನ್‌ದೆಂದು ಗೊತ್ತಿರಲಿಲ್ಲ. ಮೈಸೂರು ಪೇಟ ತೊಡಿಸಿದಂತೆ ಟಿಪ್ಪು ವೇಷ ತೊಡಿಸಿರಬಹುದು ಎಂದು ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ನನಗೆ ತೊಡಿಸಿದ್ದ ವೇಷ ಟಿಪ್ಪು ಸುಲ್ತಾನ್‌ದೆಂದು ಗೊತ್ತಿರಲಿಲ್ಲ. ಮೈಸೂರು ಪೇಟ ತೊಡಿಸಿದಂತೆ ಟಿಪ್ಪು ವೇಷ ತೊಡಿಸಿರಬಹುದು ಎಂದು ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದೆ ಕಾರ್ಯಕ್ರಮವೊಂದರಲ್ಲಿ ಶೆಟ್ಟರ್ ಹಾಗೂ ಯಡಿಯೂರಪ್ಪ ಟಿಪ್ಪು ವೇಷ ಧರಿಸಿದ್ದರು’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ನಾನು ಹಾಗೂ ನಮ್ಮ ಪಕ್ಷದ ಬಹುತೇಕ ನಾಯಕರು ಮುಸ್ಲಿಂ ಸಮಾಜದವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇವೆ. ಅದರಂತೆ ಪಾಲ್ಗೊಂಡಾಗ ನನಗೆ ಟಿಪ್ಪು ವೇಷ ತೊಡಿಸಿರಬಹುದು. ಅದು ಟಿಪ್ಪು ವೇಷ ಎಂದು ನನಗೆ ಗೊತ್ತಿರಲಿಲ್ಲ ಎಂದರು.

 ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ವೇ಼ಷ ಧರಿಸಿರುವ ಫೋಟೋ ಇದೀಗ ವೈರಲ್ ಆಗಿದ್ದು ಕೇಸರಿ ಪಕ್ಷಕ್ಕೆ ಮುಜುಗರವಾಗಿದೆ. ಆ ಫೋಟೋದಲ್ಲಿ ಬಿಜೆಪಿ ನಾಯಕರಾದ ಜಗದೇಶ್ ಶೆಟ್ಟರ್ , ಆರ್ ಅಶೋಕ್ ಟಿಪ್ಪು ಸುಲ್ತಾನನಂತೆ ವೇಷ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಪೋಸ್ ನೀಡಿದ್ದಾರೆ. 

ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಟಿಪ್ಪು ಜಯಂತಿ ಆಚರಣೆ ಮಾಡಲು ನಿರಾಕರಿಸಿದ್ದು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಬೇಡಿ ಎಂದು ಹೇಳಿದ್ದರು. ಜೊತೆಗೆ ಸಾಕಷ್ಟು ಬಿಜೆಪಿ ನಾಯಕರು ಕೂಡಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದು ಬಿಜೆಪಿಯ ಆಷಾಢಭೂತಿತನ ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.