ಬೆಂಗಳೂರು (ಸೆ.20): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆಯೇ ಮೇಲಾಯಿತಾ ಅನ್ನೋದನ್ನ ಗಮನಿಸುವಾಗ ಈ ಅಂಶಗಳು ಸಿಗುತ್ತದೆ.

ರಾಜಕೀಯ ತಂತ್ರಗಾರಿಕೆಯಲ್ಲಿಯೇ ಮೈಮರೆತ ನಾಯಕರು

ಬಿಜೆಪಿಯವರಿಗೆ ಎದಿರೇಟು ಕೊಡುತ್ತಾ ಕುಳಿತ ಕಾಂಗ್ರೆಸ್ಸಿಗರು

ಸಲಹೆ ಕೊಡಲಿಲ್ಲ, ಪ್ರಧಾನಿಯನ್ನು ತಲುಪಲಿಲ್ಲ ಬಿಜೆಪಿ ಧ್ವನಿ

ನಾವಿದ್ರೆ ರಾಜಿನಾಮೆ ಕೊಡ್ತೀವಿ ಎನ್ನುತ್ತಾ ಕಾಲ ಕಳೆದ ಬಿಜೆಪಿ

ಜೆಡಿಎಸ್ ನಲ್ಲಿ ದೇವೆಗೌಡರ ಮಾತೊಂದು, ಕುಮಾರಸ್ವಾಮಿ ಮಾತು ಇನ್ನೊಂದು

ಜೆಡಿಎಸ್ ಸರ್ಕಾರದ ಪರವೋ ಜನರ ಪರವೋ ಗೊತ್ತಾಗಲಿಲ್ಲ

ಒಟ್ಟಿನಲ್ಲಿ ಒಡಕಿನ ರಾಜಕಾರಣಕ್ಕೆ ಬೆಲೆ ತೆತ್ತದ್ದು ಕರ್ನಾಟಕ

ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಸರೆರಚಾಟ ಮುಂದುವರೆಸಿದವು. ಪ್ರಾದೇಶಿಕ ಪಕ್ಷಗಳು ದ್ವಂದ್ವ ನಿಲುವು. ಒಟ್ಟಿನಲ್ಲಿ ಕಾವೇರಿ ಸಮಸ್ಯೆಯ ಪರಿಹಾರಕ್ಕೆ ಪ್ರಭಾವ ಬೀರುವ, ಒತ್ತಡ ಹೇರುವ ಪ್ರಯತ್ನವನ್ನು ಯಾರೂ ಮಾಡದೇ ಇರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯ ಅತೀ ಹೆಚ್ಚು ಸಂಸದರು ಆಯ್ಕೆಯಾಗಿದ್ದು ಪ್ರಧಾನಿಯವರಿಗೆ ಈ ವಿಚಾರದ ಬಗ್ಗೆ ಹೇಳುವ, ಕರ್ನಾಟಕದ ಪರ ಮಾತನಾಡಿ ಪ್ರಧಾನಿಯವರು ಮಧ್ಯ ಪ್ರವೇಶಿಸುವಂತೆ ನೋಡಿಕೊಳ್ಳಲಿಲ್ಲ. ಇದು ಕೂಡಾ ಹಿನ್ನೆಡೆಗೆ ಕಾರಣವಾಗಿರಬಹುದು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾವೇರಿ ನೀರನ್ನು ಪಡೆಯುವುದರ ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೂ ಕೂಡ ಆದೇಶ ಪಡೆದುಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಒಟ್ಟಿನಲ್ಲಿ ಅಮ್ಮಾ ರಾಜಕೀಯ ತಂತ್ರಗಾರಿಕೆಗೆ ಕರ್ನಾಟಕದ ರಾಜಕಾರಣಿಗಳು ಮಂಡಿಯೂರಿ ಕುಳಿತಂತಾಗಿದೆ.

(ಒಡಕಿನ ರಾಜಕೀಯಕ್ಕೆ ಕರ್ನಾಟಕ ಬಲಿಯಾಯಿತೇ? ಓದುಗರೇ ನಿಮ್ಮ ಅಭಿಪ್ರಾಯ ತಿಳಿಸಿಹೌದು ಎಂದಾದಲ್ಲಿ YES ಇಲ್ಲ ಎಂದಾದಲ್ಲಿ NO ಟೈಪ್ ಮಾಡಿ ಈ ನಂಬರ್ ಗೆ ಕಳುಹಿಸಿ 9241012211)