ತಮಿಳು ಪದ್ಯದ ಜೊತೆಗೆ ನಮಗೆ ತೊಂದರೆ ಕೊಟ್ಟರೂ ಸರಿಯೇ ಜನರು ನಿರ್ಧರಿಸಿದ ದಿನದಂದು ನಾವು ಮುಖ್ಯಮಂತ್ರಿಗಳಾಗುತ್ತೇವೆ'

ಚೆನ್ನೈ(ಜು.19): ತಮಿಳುನಾಡಿನಲ್ಲೀಗ ಮತ್ತೊಂದು ಸುತ್ತಿನ ಸಿನಿಮಾ ನಟರ ರಾಜಕೀಯ ಪ್ರವೇಶ ಆರಂಭವಾಗಿದೆ. ಈಗಾಗಲೇ ಸೂಪರ್'ಸ್ಟಾರ್ ರಜಿನಿಕಾಂತ್ ಶೀಘ್ರದಲ್ಲಿಯೇ ರಾಜಕೀಯ ಕ್ಷೇತ್ರ ಪ್ರವೇಶಿಸುವುದಾಗಿ ಅಧಿಕೃತವಾಗಿ ಘೋಷಿಸಿಯೂ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಮತ್ತೊಬ್ಬ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್(62) ತಾವು ಸಹ ರಾಜಕೀಯ ಪ್ರವೇಶದ ಇಂಗಿತವನ್ನು ವ್ಯಕ್ತಪಡಿಸಿದ್ದು, ಟ್ವಿಟರ್'ನಲ್ಲಿ ಅದರ ಸುಳಿವು ನೀಡಿದ್ದಾರೆ. ತಮಿಳು ಪದ್ಯದ ಜೊತೆಗೆ ನಮಗೆ ತೊಂದರೆ ಕೊಟ್ಟರೂ ಸರಿಯೇ ಜನರು ನಿರ್ಧರಿಸಿದ ದಿನದಂದು ನಾವು ಮುಖ್ಯಮಂತ್ರಿಗಳಾಗುತ್ತೇವೆ' ಎಂದು' ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಅವರು ತಾವು ಆಯೋಜಿಸುವ ತಮಿಳು ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.