ಒಂದು ವೇಳೆ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದರೂ, ಅದನ್ನು ತಡೆಯುವ ಸಾಮರ್ಥ್ಯ ಪಾಕ್‌ಗೆ ಇರಲಿಲ್ಲ. ಪಾಕಿಸ್ತಾನಕ್ಕಿಂತ ಭಾರತೀಯ ವಾಯುಪಡೆ ಬಲಿಷ್ಠ ಹಾಗೂ ಉತ್ತಮ ಸ್ಥಿತಿಯಲ್ಲಿತ್ತು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬೆನ್ನಲ್ಲೇ ಸಿಐಎ ವರದಿ ತಯಾರಿಸಿತ್ತು. ಇತ್ತೀಚೆಗೆ ಸಿಐಎ ಬಹಿರಂಗಪಡಿಸಿರುವ ರಹಸ್ಯ ದಾಖಲೆಗಳಿಂದ ಈ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ(ಜ.31): ಪಾಕಿಸ್ತಾನದ ಪ್ರಮುಖ ಅಣ್ವಸ್ತ್ರ ಸ್ಥಾವರಗಳ ಮೇಲೆ ಭಾರತೀಯ ವಾಯುಪಡೆ 1984ರಲ್ಲಿ ದಾಳಿ ಮಾಡಬಹುದಾಗಿತ್ತು. ತನ್ಮೂಲಕ ಪಾಕಿಸ್ತಾನ ಹಲವು ವರ್ಷಗಳ ಕಾಲ ಅಣ್ವಸ್ತ್ರಗಳನ್ನು ಉತ್ಪಾದನೆ ಮಾಡದಂತೆಯೇ ತಡೆಯಬಹುದಾಗಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ರಹಸ್ಯ ವರದಿಯೊಂದನ್ನು ಸಿದ್ಧಪಡಿಸಿತ್ತು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಒಂದು ವೇಳೆ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದರೂ, ಅದನ್ನು ತಡೆಯುವ ಸಾಮರ್ಥ್ಯ ಪಾಕ್‌ಗೆ ಇರಲಿಲ್ಲ. ಪಾಕಿಸ್ತಾನಕ್ಕಿಂತ ಭಾರತೀಯ ವಾಯುಪಡೆ ಬಲಿಷ್ಠ ಹಾಗೂ ಉತ್ತಮ ಸ್ಥಿತಿಯಲ್ಲಿತ್ತು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬೆನ್ನಲ್ಲೇ ಸಿಐಎ ವರದಿ ತಯಾರಿಸಿತ್ತು. ಇತ್ತೀಚೆಗೆ ಸಿಐಎ ಬಹಿರಂಗಪಡಿಸಿರುವ ರಹಸ್ಯ ದಾಖಲೆಗಳಿಂದ ಈ ವಿಷಯ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಕಠುವಾ ಅಣು ಸಂಸ್ಕರಣ ಕೇಂದ್ರ ಹಾಗೂ ಪಿನ್ಸ್‌ಟೆಕ್ ಹೊಸ ಪ್ರಯೋಗಾಲಯಗಳು ಭಾರತದಿಂದ 30 ನಿಮಿಷಗಳ ಅಂತರದಲ್ಲಿ ಇದ್ದವು. ಅಲ್ಲದೆ ಮಧ್ಯಮ ದೂರ ಸಾಮರ್ಥ್ಯ ಹೊಂದಿದ್ದ ಮಿಗ್ 29ಎಸ್ ವಿಮಾನಗಳ ನಿರೀಕ್ಷೆಯಲ್ಲಿ ಭಾರತ ಇತ್ತು. ಇವು ಎಫ್-16 ವಿಮಾನಕ್ಕಿಂತ ಉತ್ತಮ ಸಾಮರ್ಥ್ಯ ಹೊಂದಿದ್ದವು ಎಂದು ಅಮೆರಿಕ 1984ರಲ್ಲಿ ತಯಾರಿಸಿದ್ದ ವರದಿಯಲ್ಲಿ ಮಾಹಿತಿ ಇದೆ.