ಸರಕಾರ ರಾಜಾಕಾಲುವೆಗಳ ದುರಸ್ತಿಗಾಗಿ 800 ಕೋಟಿ ರೂ ವ್ಯಯಿಸಿದೆ. ಕೇಂದ್ರ ಸರಕಾರ ಕೂಡ 200 ಕೋಟಿ ರೂ ಅನುದಾನ ಕೊಟ್ಟಿದೆ. ಇಷ್ಟಾದರೂ ರಾಜಾಕಾಲುವೆಗಳು ತುಂಬಿಹರಿಯುವುದು ತಪ್ಪಿಲ್ಲ. ಜನಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗುವುದು ತಪ್ಪಿಲ್ಲ. ಹಾಗಾದರೆ, ರಾಜಾಕಾಲುವೆ ದುರಸ್ತಿಗೆ 800 ರೂಪಾಯಿ ವ್ಯಯಿಸಿರುವುದು ನಿಜವೇ? ದುರಸ್ತಿ ನಡೆಯದೇ ಇದ್ದರೆ ಆ ಹಣ ಎಲ್ಲಿಗೆ ಹೋಯಿತು? ಕೇಂದ್ರ ಕೊಟ್ಟ 200 ರೂ ಅನುದಾನದ ಹಣ ಏನಾಯಿತು? ಈ ಪ್ರಶ್ನೆಗೆ ಸರಕಾರ ಉತ್ತರ ಕೊಡುವುದೇ?

ಬೆಂಗಳೂರು(ಆ. 15): ತಂಪೆರೆಯಲು ಬಂದಿದ್ದ ಭಾರೀ ಮಳೆಗೆ ಉದ್ಯಾನನಗರಿ ನಿನ್ನೆ ಅಕ್ಷರಶಃ ತತ್ತರಿಸಿಹೋಗಿದೆ. ಅನೇಕ ಮರಗಳು ಧರೆಗುರುಳಿವೆ. ಆದರೆ, ರಾಜಾಕಾಲುವೆಗಳು ತುಂಬಿಹರಿದು ಅನೇಕ ಅವಘಡಗಳೂ ಸಂಭವಿಸಿವೆ. ಬೆಂಗಳೂರಿನ ಬಹಳಷ್ಟು ಸ್ಥಳಗಳು ನೀರಿನಲ್ಲಿ ಮುಳುಗಿಹೋಗಿವೆ. ಇವಿಷ್ಟೂ ಮಳೆ ಬಂದಾಗೆಲ್ಲಾ ಸಿಲಿಕಾನ್ ಸಿಟಿಯನ್ನು ಬಾಧಿಸುವ ಸಂಗತಿಗಳು. ಹಿಂದೆ ಇವುಗಳಿಂದಾಗಿ ಹಲವು ಸಾವುನೋವು ಉಂಟಾಗಿದ್ದವು. ರಾಜಾಕಾಲುವೆಗಳ ಹೀನ ಪರಿಸ್ಥಿತಿ ಇದಕ್ಕೆ ಕಾರಣವೆಂದು ಹೇಳಲಾಗಿತ್ತು. ಅದಾದ ಬಳಿಕ ಸರಕಾರ ರಾಜಾಕಾಲುವೆಗಳ ದುರಸ್ತಿಗಾಗಿ 800 ಕೋಟಿ ರೂ ವ್ಯಯಿಸಿದೆ. ಕೇಂದ್ರ ಸರಕಾರ ಕೂಡ 200 ಕೋಟಿ ರೂ ಅನುದಾನ ಕೊಟ್ಟಿದೆ. ಇಷ್ಟಾದರೂ ರಾಜಾಕಾಲುವೆಗಳು ತುಂಬಿಹರಿಯುವುದು ತಪ್ಪಿಲ್ಲ. ಜನಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗುವುದು ತಪ್ಪಿಲ್ಲ. ಹಾಗಾದರೆ, ರಾಜಾಕಾಲುವೆ ದುರಸ್ತಿಗೆ 800 ರೂಪಾಯಿ ವ್ಯಯಿಸಿರುವುದು ನಿಜವೇ? ದುರಸ್ತಿ ನಡೆಯದೇ ಇದ್ದರೆ ಆ ಹಣ ಎಲ್ಲಿಗೆ ಹೋಯಿತು? ಕೇಂದ್ರ ಕೊಟ್ಟ 200 ರೂ ಅನುದಾನದ ಹಣ ಏನಾಯಿತು? ಈ ಪ್ರಶ್ನೆಗೆ ಸರಕಾರ ಉತ್ತರ ಕೊಡುವುದೇ?