Asianet Suvarna News Asianet Suvarna News

ಬಾಹುಬಲಿ-2 ನಟ ಪ್ರಭಾಸ್ ಮೋದಿಯನ್ನು ಭೇಟಿಯಾಗಿ ಯೋಧರಿಗೆ 120 ಕೋಟಿ ರೂ ಕೊಟ್ಟರೆ ?

ಪ್ರಸ್ತುತ ಬಿಡುಗಡೆಯಾಗಿರುವ ಬಾಹುಬಲಿ-2 ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ 600 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.       

Did Baahubali Actor Prabhas Donate Rs 121 Crore To CRPF Jawans
  • Facebook
  • Twitter
  • Whatsapp

ಹೈದರಾಬಾದ್(ಮೇ.06): ಬಾಹುಬಲಿ ಸಿನಿಮಾದ ನಾಯಕ ನಟ ಪ್ರಭಾಸ್ ಸಿಆರ್'ಪಿಎಫ್ ಯೋಧರಿಗಾಗಿ 120 ಕೋಟಿ ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ  ದಾನ ಮಾಡಿರುವ ಚಿತ್ರ ವಾಟ್ಸ್'ಅಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ ಚಿತ್ರಕ್ಕೂ ಹಣ ದಾನ ಮಾಡಿರುವ ವಿಷಯಕ್ಕೂ ಸಂಬಂಧವೇ ಇಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು ಪ್ರಭಾಸ್ ಮೋದಿ ಅವರನ್ನು ಭೇಟಿ ಮಾಡಿರುವುದು ನಿಜವಾದರೂ ಅದು ಬಾಹುಬಲಿ ಮೊದಲ ಭಾಗ ಚಿತ್ರ ಬಿಡುಗಡೆಯಾಗಿ ಯಶಸ್ಸು ಗಳಿಸಿದಾಗ 2015ರ ಜುಲೈ'ನಲ್ಲಿ ಭೇಟಿಯಾಗಿದ್ದ ಚಿತ್ರವಾಗಿದೆ. ಕೆಲವರು ಬೇಕಂತಲೇ ಈ ಸುದ್ದಿಯನ್ನು ತಿರುಚಿ ಸುಳ್ಳು ಪ್ರಚಾರ ಮಾಡಿದ್ದಾರೆ' ಎನ್ನಲಾಗಿದೆ. ಪ್ರಸ್ತುತ ಬಿಡುಗಡೆಯಾಗಿರುವ ಬಾಹುಬಲಿ-2 ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ 600 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.       

Follow Us:
Download App:
  • android
  • ios