ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ. ಆದರೆ ಸೂರತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಡೋಲಕಿಯಾ ಅವರು ತನ್ನ ಉದ್ಯೋಗಿಗಳಿಗೆ ಈ ಬಾರಿ 400 ಫ್ಲ್ಯಾಟ್ಸ್ ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ.
ಸೂರತ್(ಅ.28): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ. ಆದರೆ ಸೂರತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಡೋಲಕಿಯಾ ಅವರು ತನ್ನ ಉದ್ಯೋಗಿಗಳಿಗೆ ಈ ಬಾರಿ 400 ಫ್ಲ್ಯಾಟ್ಸ್ ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ.
ಡೋಲಕಿಯಾ ಅವರ ಹರೇ ಕೃಷ್ಣಾ ಎಕ್ಸ್ ಪೋರ್ಟ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಈ ವರ್ಷದ ದೀಪಾವಳಿಗೆ ಬರೋಬ್ಬರಿ 51 ಕೋಟಿ ರೂಪಾಯಿಯಷ್ಟು ಖರ್ಚು ಮಾಡಿದೆ. ಸುಮಾರು 1,716 ಉದ್ಯೋಗಿಗಳು ಕಂಪನಿಯ ಉತ್ತಮ ಕೆಲಸಗಾರರು ಎಂದು ಹೆಸರಿಸಲಾಗಿತ್ತಂತೆ.
