ಇತ್ತ ಬೆಂಗಳೂರಿನಲ್ಲಿರುವ ವಿಧಾನಸೌದಕ್ಕೆ 75 ವರುಷ ತುಂಬುವ ಮುನ್ನವೇ ಅಂದರೆ 60 ವರುಷಕ್ಕೆ ವಜ್ರಮಹೋತ್ಸವಕ್ಕೆ 27 ಕೋಟಿ ವೆಚ್ಚಮಾಡಿ ವಜ್ರಮಹೋತ್ಸವ ಆಚರಣೆಗೆ ಅದ್ದೂರಿ ತಯಾರಿ ನಡೆದಿದೆ.

ಬೆಂಗಳೂರು (ಅ.15): ಇತ್ತ ಬೆಂಗಳೂರಿನಲ್ಲಿರುವ ವಿಧಾನಸೌದಕ್ಕೆ 75 ವರುಷ ತುಂಬುವ ಮುನ್ನವೇ ಅಂದರೆ 60 ವರುಷಕ್ಕೆ ವಜ್ರಮಹೋತ್ಸವಕ್ಕೆ 27 ಕೋಟಿ ವೆಚ್ಚಮಾಡಿ ವಜ್ರಮಹೋತ್ಸವ ಆಚರಣೆಗೆ ಅದ್ದೂರಿ ತಯಾರಿ ನಡೆದಿದೆ.

ಅತ್ತ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣಸೌಧಕ್ಕೆ ಐದು ವರ್ಷು ತುಂಬುತ್ತಿದೆ. ಆದರೆ ಈ ಬೆಳಗಾವಿ ಸುವರ್ಣಸೌಧ ಮಾತ್ರ ದಿನೇ ದಿನೇ ಹಾಳಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಶಕ್ತಿಸೌಧದಲ್ಲಿ ಸ್ವಚ್ಛತೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಮತ್ತು ಸರ್ಕಾರದ ಮಧ್ಯದ ನಿರ್ಹವಣೆಗೆ ನೀಡುವ ಹಣ ನೀಡುವ ವಿಚಾರದಲ್ಲಿ ಉಂಟಾದ ಗೊಂದಲದಿಂದ ಈ ಸಮಸ್ಯೆ ಉದ್ಭವವಾಗಿದ್ದು, ಇದರಿಂದ ಗುತ್ತಿಗೆದಾರರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರ್ಮಿಕರು ಸೇವೆಯನ್ನ ಸ್ಥಗಿತಗೊಳಿಸಿದ್ದಾರೆ. ದಿನವೂ 100ಕ್ಕೂ ಅಧಿಕ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನ ಮಾಡುತ್ತಿದ್ದರು. ಈಗ ಸುವರ್ಣ ಸೌಧದ ಒಳಾಂಗಣದಲ್ಲಿ ಎಲ್ಲಿ ನೋಡಿದರೂ ಅಸ್ವಚ್ಛತೆ ಕಂಡು ಬರುತ್ತಿದೆ. ಎಲ್ಲೆಲ್ಲಂದರಲ್ಲಿ ಪಾರಿವಾಗಳು ಕಕ್ಕ ಹಾಕಿರುವ ದೃಶ್ಯಗಳು, ಸಚಿವರು, ಅಧಿಕಾರಿಗಳ ಕೊಠಡಿ ಬಳಿ ಸತ್ತು ಬಿದ್ದಿರುವ ಹುಳಗಳು. ಸುವರ್ಣ ಸೌಧದ ಒಳಾಂಗಣದ ಮೂಲೆ ಮೂಲೆಗಳಲ್ಲಿ ಹೆಜ್ಜೆನು ಗೂಡು ಕಟ್ಟಿರುವ ದೃಶಗಳು ಕಂಡು ಬರುತ್ತದೆ. ಅಲ್ಲದೆ 80 ಲಕ್ಷ ವಿದ್ಯುತ್ ಬಿಲ್ ಕಟ್ಟಿಲ್ಲ. ಕಳೆದ ಏಪ್ರೀಲ್’ನಿಂದ ಸ್ವಚ್ಚತಾ ಗುತ್ತಿಗೆದಾರರಗೆ 4.30 ಕೋಟಿ ಹಣ ಸಂದಾಯ ಮಾಡಿದಿದ್ದಕ್ಕೆ ಎರಡು ತಿಂಗಳುಗಳಿಂದ ಸುವರ್ಣ ಸೌಧ ಧೂಳು ಹಿಡಿದಿದೆ. ಹೀಗೆ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಶಕ್ತಿ ಕೇಂದ್ರ ಇಂದು ಅರಸನಿಲ್ಲದ ಅರಮನೆಯಾಗಿದೆ. ನವಂಬರ್ ತಿಂಗಳು ಬೆಳಗಾವಿ ಶಕ್ತಿ ಸೌಧದಲ್ಲಿ 10 ದಿನಗಳ ಕಾಲ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಆದರೂ ಸಹ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳದಿರುವುದು ಉತ್ತರ ಕರ್ನಾಟಕದ ಮೇಲೆ ಈ ಕಾಂಗ್ರೆಸ್ ಸರ್ಕಾರ ಎಷ್ಟು ಪ್ರೀತಿ ಇಟ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಆದ್ರೆ ಸಭಾಧ್ಯಕ್ಷ ಕೋಳಿವಾಡ ಸಾಹೇಬರು ನನ್ನ ಗಮನಕ್ಕೆ ಬಂದಿಲ್ಲಾ ನೀವು ನನ್ನ ಗಮನಕ್ಕೆ ತಂದಿದ್ದಿರಿ ಆದಷ್ಟು ಬೇಗ ಹಣ ನೀಡುತ್ತೇನೆ ಎಂದಿದ್ದಾರೆ.