ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ[ಸೆ.12]: ಅಕ್ರಮ ಹಣ ಪತ್ತೆ ಪ್ರಕ​ರ​ಣ​ದಲ್ಲಿ ಜಾರಿ ನಿರ್ದೇ​ಶ​ನಾ​ಲಯ (ಇ​ಡಿ) ವಶ​ದ​ಲ್ಲಿ​ರುವ ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌, ಮಾಜಿ ಸ​ಚಿವ ಡಿ.ಕೆ.​ಶಿ​ವ​ಕು​ಮಾರ್‌ ಅವರ ಪುತ್ರಿ ಐಶ್ವರ್ಯಾ ಕೇವಲ 10 ವರ್ಷ​ಗಳ ಅಂತ​ರ​ದಲ್ಲಿ .9.50 ಲಕ್ಷದಿಂದ .108 ಕೋಟಿ ಆಸ್ತಿ ಸಂಪಾ​ದಿಸಿದ್ದಾರೆ.

2004 ರಿಂದ 2018ರ ನಡು​ವೆ ನಡೆ​ದಿ​ರು​ವ ನಾಲ್ಕು ವಿಧಾ​ನ​ಸ​ಭಾ ಚುನಾ​ವ​ಣೆ​ಗ​ಳ​ಲ್ಲಿ ಸ್ಪರ್ಧಿ​ಸಿ​ರುವ ಡಿ.ಕೆ.​ಶಿ​ವ​ಕು​ಮಾ​ರ್‌, ಚುನಾ​ವ​ಣಾ ಆಯೋ​ಗ​ಕ್ಕೆ ಸಲ್ಲಿ​ಸಿರುವ ಆಸ್ತಿ ವಿವ​ರ​ದ​ ಪ್ರಮಾ​ಣಪತ್ರ​ದಲ್ಲಿ ಪುತ್ರಿ ಐಶ್ವರ್ಯ ಹೊಂದಿ​ರುವ ಆಸ್ತಿ ವಿವರ ಇದನ್ನು ಸಾಬೀತು​ಪಡಿಸುತ್ತಿ​ದೆ.

ಡಿಕೆ​ಶಿ ದಂಪತಿಗೆ ಪುತ್ರಿ​ಯ​ರಾ​ದ ಐಶ್ವರ್ಯಾ, ಆಭ​ರಣಾ ಮತ್ತು ಪುತ್ರ ಆಕಾಶ್‌ ಗೌಡ ಇದ್ದಾರೆ. ಐಶ್ವರ್ಯಾ ಹೆಸ​ರಿ​ನಲ್ಲಿಯೇ ಡಿಕೆ​ಶಿ ಹೆಚ್ಚಾಗಿ ಚರಾಸ್ತಿ ಮತ್ತು ಸ್ಥಿರಾ​ಸ್ತಿ​ಯನ್ನು ಇಟ್ಟಿ​ದ್ದಾರೆ. ಅಲ್ಲದೆ, ಹೆಚ್ಚಿನ ಪ್ರಮಾ​ಣ​ದಲ್ಲಿ ಹಣ​ಕಾ​ಸಿನ ವಹಿ​ವಾ​ಟನ್ನು ನಡೆ​ಸಿ​ದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯಾಗೂ ಕಂಟಕ : ಇ.ಡಿ. ವಿಚಾರಣೆ

2004ರ ವಿಧಾ​ನ​ಸ​ಭಾ ಚುನಾ​ವ​ಣೆ​ಯ​ಲ್ಲಿ ಡಿ.ಕೆ.​ಶಿ​ವ​ಕು​ಮಾ​ರ್‌ ಚುನಾ​ವ​ಣಾ ಆಯೋ​ಗ​ಕ್ಕೆ ಸಲ್ಲಿ​ಸಿ​ದ್ದ ಆಸ್ತಿ ವಿವ​ರ​ದ​ ಪ್ರಮಾ​ಣ ಪತ್ರ​ದಲ್ಲಿ ಎಲ್ಲಿಯೂ ಐಶ್ವರ್ಯಾ ಹೆಸ​ರಿ​ನಲ್ಲಿ ಚಿನ್ನಾ​ಭ​ರಣ, ಹಣ ಹೂಡಿಕೆ ಅಥವಾ ಸಾಲ ಮಾಡಿ​ರು​ವು​ದಾ​ಗಲಿ ಉಲ್ಲೇಖಿ​ಸಿರಲಿಲ್ಲ. ಆದರೆ, 2008ರ ಚುನಾ​ವ​ಣೆ​ಯಲ್ಲಿ ತನ್ನ 12 ವರ್ಷ ವಯ​ಸ್ಸಿನ ಪುತ್ರಿ ಐಶ್ವರ್ಯಾ ಹೆಸ​ರಿಲ್ಲಿ .9.50 ಲಕ್ಷ ಮೌಲ್ಯದ 950 ಗ್ರಾಂ ಚಿನ್ನಾ​ಭ​ರಣ ಇರು​ವು​ದಾಗಿ ತಿಳಿ​ಸಿ​ದ್ದರು.

2013ರಲ್ಲಿ ಡಿ.ಕೆ.ಶಿವಕುಮಾರ್‌ ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ 2008ರಲ್ಲಿದ್ದ ಮಾರುಕಟ್ಟೆಬೆಲೆಯನ್ನೇ 2013ರಲ್ಲೂ ವ್ಯಕ್ತವಾಗಿದೆ. ಅಂದರೆ ಈ ಕುಟುಂಬದ ಪ್ರಕಾರ ಆಭರಣಗಳ ಮಾರುಕಟ್ಟೆಯ ಬೆಲೆ ಹೆಚ್ಚಾಗಿಲ್ಲ. ಆದರೆ, ಐಶ್ವರ್ಯಾ, ತಂದೆ ಡಿ.ಕೆ.ಶಿವಕುಮಾರ್‌ ಅವರಿಂದ .61.75 ಲಕ್ಷ ಸಾಲ ಪಡೆದು ಮುಂಬೈನಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ.

18 ವರ್ಷ ವಯ​ಸ್ಸಿ​ನಲ್ಲಿ ಐಶ್ವರ್ಯಾ ಮುಂಬೈ​ನಲ್ಲಿ ಖರೀ​ದಿ​ಸಿದ ಅಪಾರ್ಟ್‌ಮೆಂಟ್‌ ಬೆಲೆ ಬರೋ​ಬ್ಬರಿ .1 ಕೋಟಿ ಮಾರು​ಕಟ್ಟೆಬೆಲೆ ಪಡೆ​ದು​ಕೊಂಡಿದೆ. ಆಕೆಯ ಬಳಿ​ಯಿದ್ದ ಚಿನ್ನಾ​ಭ​ರ​ಣವೂ ಸೇರಿ .1.9 ಕೋಟಿ ಒಡ​ತಿಯಾಗಿ​ದ್ದರು.

2013ರಲ್ಲಿ .1 ಕೋಟಿ ರುಪಾಯಿ ಆಸ್ತಿ ಹೊಂದಿದ್ದ ಐಶ್ವರ್ಯಾ 2018ರ ವಿಧಾ​ನ​ಸಭಾ ಚುನಾ​ವಣೆ ವೇಳೆಗೆ .108 ಕೋಟಿ ಆಸ್ತಿ ಹೊಂದಿದ ಸಿರಿ​ವಂತೆ​ಯಾ​ಗಿ​ದ್ದಾರೆ. ಇದನ್ನು ಆಕೆಯ ತಂದೆ ಡಿ.ಕೆ.ಶಿವಕುಮಾರ್‌ ಸ್ವತಃ ಘೋಷಿಸಿದ್ದಾರೆ.

2018ರಲ್ಲಿ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ ಅಫಿಡೆವಿಟ್‌ ಪ್ರಕಾರ ಐಶ್ವರ್ಯಾ ಬಳಿ .3.80 ಲಕ್ಷ ನ​ಗದು, ಎರ​ಡು ಬ್ಯಾಂಕ್‌ಗಳಲ್ಲಿ .1.23 ಕೋಟಿ ಹಣ​ವಿತ್ತು. ಐಶ್ವರ್ಯಾ ಹೆಸರಿನಲ್ಲಿದ್ದ ಕೃಷಿ ಭೂಮಿಯ ಮಾರುಕಟ್ಟೆಯ ಮೌಲ್ಯ .27.50 ಲಕ್ಷ, ಕೃಷಿಯೇತರ ಭೂಮಿಯ ಮಾರುಕಟ್ಟೆಯ ಮೌಲ್ಯ .25.30 ಕೋಟಿ, ಆಕೆಯ ಹೆಸರಿನಲ್ಲಿರುವ ವಾಸದ ಮನೆಯ ಮಾರುಕಟ್ಟೆಯ ಮೌಲ್ಯ .1.20 ಕೋಟಿ, ಬೆಂಗಳೂರು ಬೆಳ್ಳಂದೂರಿನಲ್ಲಿ ಸೌಲ್‌ ಸ್ಟೇಸ್‌ ಸ್ಪರಿಟ್‌ ಮಾಲ್‌ನಲ್ಲಿ ಜಾಗ ಖರೀದಿಗೆಂದು ಆಕೆ ಕೊಟ್ಟಮುಂಗಡ .76.11 ಕೋಟಿ ಹಾಗೂ ಸೌಲ್‌ ಸ್ಪೇಸ್‌ನಲ್ಲಿ ಜಾಗ ಖರೀದಿಗಾಗಿ ಐಶ್ವರ್ಯಾ ಹೆಸರಿನಲ್ಲಿ ವಿಜಯ ಬ್ಯಾಂಕಿನಲ್ಲಿ .39.82 ಕೋಟಿ ಸಾಲ ಪಡೆಯಲಾಗಿದೆ.

40 ಕೋಟಿ ಸಾಲ​ಗಾರ್ತಿ

108 ಕೋಟಿ ಆಸ್ತಿ ಒಡತಿ ಐಶ್ವರ್ಯಾ, ತಮ್ಮ ತಂದೆ ಡಿ.ಕೆ.ಶಿವಕುಮಾರ್‌ ಅವರಿಗೆ .11.32 ಕೋಟಿ ಬಾಕಿ ಕೊಡಬೇಕಾಗಿದೆ. ಚಿಕ್ಕಪ್ಪ, ಸಂಸದ ಡಿ.ಕೆ.ಸುರೇಶ್‌ ಅವರಿಗೆ .6.87 ಕೋಟಿ ಮತ್ತು ಅಜ್ಜಿ ಗೌರಮ್ಮ ಅವರಿಗೂ ಈಕೆ .36.67 ಲಕ್ಷ ಬಾಕಿ ಕೊಡಬೇಕಾಗಿದೆ. ಡಿ.ಕೆ.ಶಿವಕುಮಾರ್‌ ಆಪ್ತ ಹಾಗೂ ರಾಮನಗರ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಅವರಿಗೆ .1.75 ಕೋಟಿ, ಎನ್‌.ಎಂ.ಗ್ರಾನೈಟ್‌ಗೆ .1.25 ಕೋಟಿ ಮತ್ತು ಸಿವನ್‌ ಆ್ಯಂಡ್‌ ಕಂಪನಿಗೆ .18.84 ಕೋಟಿ ಸಾಲ ಕೊಡಬೇಕಾಗಿದೆ. ಐಶ್ವರ್ಯಾ ಅವರು ಒಟ್ಟು (2018ರ ಅಫಿಡೆವಿಟ್‌ ಪ್ರಕಾರ) .40.40 ಕೋಟೊ ಬಾಕಿ ಉಳಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿಯಲ್ಲಿ ಕೃಷಿಯೇತರ ಭೂಮಿ ಸರ್ವೆ ಸಂಖ್ಯೆ 177ರಲ್ಲಿ 3 ಎಕರೆ ಮತ್ತು ಸರ್ವೆ ಸಂಖ್ಯೆ 178ರಲ್ಲಿ 2.87 ಎಕರೆ ಭೂಮಿಯನ್ನು ಐಶ್ವರ್ಯಾ ತಮ್ಮ ಅಜ್ಜಿ ಗೌರಮ್ಮ ಅವರಿಂದ ಗಿಫ್ಟ್‌ ರೂಪದಲ್ಲಿ ಪಡೆದುಕೊಂಡಿದ್ದಾರೆ. ಹೀಗೆ ಪಡೆದುಕೊಂಡ ಸ್ಥಿರಾಸ್ತಿಯ ಮಾರುಕಟ್ಟೆಯ ಬೆಲೆ .25.29 ಕೋಟಿ ಆಗಿ​ದೆ.

ಐಶ್ವರ್ಯಾ ಅವರ ಬಳಿ 2018ರಲ್ಲಿ ಒಟ್ಟು .5.17 ಕೋಟಿ ಮೌಲ್ಯದ ಚÜರಾಸ್ತಿ ಹಾಗೂ 102.88 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಸ್ಥಿರಾಸ್ತಿಯ ಪೈಕಿ .77.59 ಕೋಟಿ ಮೌಲ್ಯದ ಆಸ್ತಿ ಇವರೇ ಸಂಪಾದಿಸಿದ್ದು. .25.29 ಕೋಟಿ ಮೌಲ್ಯದ ಆಸ್ತಿ ಬಳುವಳಿ ರೂಪ​ದಲ್ಲಿ ಪಡೆದುಕೊಂಡಿದ್ದಾರೆ. ಒಟ್ಟಾರೆ ಐಶ್ವರ್ಯಾ 108.05 ಕೋಟಿ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿ​ದ್ದಾ​ರೆ.

ಡಿ.ಕೆ.​ಶಿ​ವ​ಕು​ಮಾರ್‌ ಪುತ್ರಿ ಐಶ್ವರ್ಯಾ 108 ಕೋಟಿ ರುಪಾಯಿ ಆಸ್ತಿ ಹೊಂದಿ​ದ್ದರೆ, (2008ರ ಚುನಾ​ವಣೆ ಅಫಿ​ಡಿ​ವಿಟ್‌ ಪ್ರಕಾ​ರ​) ಉಳಿದ ಅವರ ಮತ್ತೊಬ್ಬ ಪುತ್ರಿಆಭ​ರಣ ಬಳಿ 675 ಗ್ರಾಂ ಮತ್ತು ಪುತ್ರ ಆಕಾಶ್‌ ಕೆಂಪೇ​ಗೌಡ ಬಳಿ 615 ಗ್ರಾಂ ಚಿನ್ನಾ​ಭ​ರಣ ಇರು​ವು​ದಾಗಿ ಘೋಷಿ​ಸಿ​ದ್ದಾ​ರೆ.

ಹಿಗ್ಗು​ತ್ತಲೇ ಸಾಗಿದೆ ಡಿಕೆಶಿ ಆಸ್ತಿ!

ದೇಶದ ಸಿರಿವಂತ ಸಚಿವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದ ಡಿ.ಕೆ.ಶಿವಕುಮಾರ್‌ ಅವರು 2018ರ ವಿಧಾ​ನ​ಸಭಾ ಚುನಾ​ವಣೆ ವೇಳೆ .619 ಕೋಟಿ ಮೌಲ್ಯದ ಚರಾಸ್ಥಿ ಮತ್ತು ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. 2004ರ ಚುನಾವಣೆಯಲ್ಲಿ ಸಚಿವ ಶಿವಕುಮಾರ್‌ .7.84 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಕೇವಲ 14 ವರ್ಷಗಳಲ್ಲಿ ಅಂದರೆ 2018ರ ವೇಳೆಗೆ ಸುಮಾರು .611 ಕೋಟಿ ಆಸ್ತಿ ಸಂಪಾದಿಸಿ​ದ್ದಾ​ರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಬಳಿ .251 ಕೋಟಿಯಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಐದು ವರ್ಷಗಳಲ್ಲಿ .368 ಕೋಟಿ ಹೆಚ್ಚಳವಾಗಿದೆ.

ಡಿಕೆಶಿಗೆ ಗಾಯದ ಮೇಲೆ ಬರೆ: ತಂದೆ ಬೆನ್ನಲ್ಲೇ ಮಗಳು ಐಶ್ವರ್ಯಾ ವಿಚಾರಣೆ!

ಸಚಿವ ಶಿವಕುಮಾರ್‌ 2016-17ನೇ ಸಾಲಿಗೆ 87.54 ಲಕ್ಷ ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. 2011-12ನೇ ಸಾಲಿನಲ್ಲಿ ಇವರ ವಾರ್ಷಿಕ ಆದಾಯ 58 ಲಕ್ಷ ಇತ್ತು. ಅಂದರೆ ಇವರ ವಾರ್ಷಿಕ ಆದಾಯ ಕಳೆದ 5 ವರ್ಷಗಳಲ್ಲಿ ಸರಾಸರಿ .30 ಲಕ್ಷ ಏರಿಕೆಯಾಗಿದೆ. ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಅವರ ಕುಟುಂಬದ ಆಸ್ತಿ ಗಳಿಕೆ ಚುನಾ​ವ​ಣೆ​ಯಿಂದ ಚುನಾ​ವ​ಣೆಗೆ ಭಾರೀ ಪ್ರಮಾ​ಣ​ದಲ್ಲಿ ಹಿಗ್ಗುತ್ತಲೇ ಸಾಗಿದೆ. ಅವರ ಕುಟುಂಬದಲ್ಲಿ ಹಾಲಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಲೆಕ್ಕ ಹಾಕಿದರೆ ಸುಮಾರು 800 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯಿದೆ.