ಪಂದ್ಯ ಸೋಲಲಿ.. ಗೆಲ್ಲಲಿ... ತಾಳ್ಮೆಯನ್ನ ಕಳೆದುಕೊಳ್ಳುತ್ತಿರಲಿಲ್ಲ. ಇದಕ್ಕಾಗಿಯೇ ಕೂಲ್‌ ಕ್ಯಾಪ್ಟನ್‌ ಅಂತಲೂ ಬಿಂಬಿತವಾಗಿದ್ದರು. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುತ್ತಿರಲಿಲ್ಲ. ಅದರಲ್ಲೂ ಎದುರಾಳಿ ತಂಡದ ವೀಕ್‌ನೆಸ್‌ಗಳನ್ನ ಬಲು ಬೇಗನೇ ಅರ್ಥಮಾಡಿಕೊಳ್ಳುವ  ಮಹಿ, ಗ್ಯಾಂಬಲ್‌ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಆಗಿದ್ದರು. ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್‌ ಆಗಿತ್ತು.

ಎಂಎಸ್ ಧೋನಿ ಒಬ್ಬ ಅದ್ಭುತ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಟೀಮ್​ ಇಂಡಿಯಾಗೆ ಒಂದು ಹೊಸ ರೂಪವನ್ನು ಕೊಟ್ಟ ಮಹಾನ್​ ಆಟಗಾರ, ನಾಯಕ. ಕ್ಯಾಪ್ಟನ್ ಆಗಿ ದಶಕಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ಆಟಗಾರ.

ಮಹೇಂದ್ರ ಸಿಂಗ್ ಧೋನಿ. ವಿಶ್ವ ಕ್ರಿಕೆಟ್'ಗೆ ಗ್ರೇಟ್ ಲೀಡರ್. ಟೀಂ ಇಂಡಿಯಾದ ಶ್ರೇಷ್ಠ ನಾಯಕ, ಒಡನಾಡಿಗಳಿಗೆ ಕೂಲ್ ಕ್ಯಾಪ್ಟನ್. ಅಭಿಮಾನಿಗಳಿಗೆ ಪಕ್ಕಾ ಎಂಟರ್'ಟೈನರ್. ಜಾಹೀರಾತು ಕಂಪೆನಿಗಳಿಗೆ ಸೂಪರ್ ಸ್ಟಾರ್. ಎದುರಾಳಿ ತಂಡಗಳಿಗೆ ಗ್ಯಾಂಬ್ಲರ್. ಅಷ್ಟೇ ಅಲ್ಲ ಕ್ಲಾಸಿಗೂ ಸೈ, ಮಾಸಿಗೂ ಜೈ ಅನ್ನುವ ರಾಂಚಿ ರಾಂಬೋ ವಿಶ್ವ ಕ್ರಿಕೆಟ್​ನ ಎವರ್ ಗ್ರೀನ್ ಹೀರೋ.

ಧೋನಿಗೆ ಕ್ರಿಕೆಟ್ ಎಲ್ಲವನ್ನು ಕೊಟ್ಟಿದೆ. ಎಲ್ಲವೂ ಬಯಸದೇ ಬಂದ ಭಾಗ್ಯ. ಅದನ್ನೆಲ್ಲಾ ಧೋನಿ ಸಮರ್ಥವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಯಶಸ್ಸಿನ ಉತ್ತುಗಕ್ಕೇರಿದ ಧೋನಿಗೆ ನೇಮ್, ಫೇಮ್, ದುಡ್ಡು ಎಲ್ಲವೂ ಸಿಕ್ಕಿದೆ. ಲೈಫ್ ಅನ್ನು ಬಿಂದಾಸ್ ಆಗಿ ಎಂಜಾಯ್ ಮಾಡುವ ಧೋನಿಗೆ ಅತೀಯಾದ ಆಸೆ ಇಲ್ಲ. ಈ ನಿಟ್ಟಿನಲ್ಲಿ ಧೋನಿ ಇತರೆ ಕ್ರಿಕೆಟಿಗರಿಗಿಂತ ಭಿನ್ನ , ವಿಭಿನ್ನ.

ಅಂದ ಹಾಗೇ, ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ತನ್ನದೇ ಅದ ಚಾರ್ಮ್‌ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ... ತಾಳ್ಮೆಯನ್ನ ಕಳೆದುಕೊಳ್ಳುತ್ತಿರಲಿಲ್ಲ. ಇದಕ್ಕಾಗಿಯೇ ಕೂಲ್‌ ಕ್ಯಾಪ್ಟನ್‌ ಅಂತಲೂ ಬಿಂಬಿತವಾಗಿದ್ದರು. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುತ್ತಿರಲಿಲ್ಲ. ಅದರಲ್ಲೂ ಎದುರಾಳಿ ತಂಡದ ವೀಕ್‌ನೆಸ್‌ಗಳನ್ನ ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಹಿ, ಗ್ಯಾಂಬಲ್‌ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಆಗಿದ್ದರು. ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್‌ ಆಗಿತ್ತು.

ವಿಕೆಟ್​ ಹಿಂದಿನ ಮಾಂತ್ರಿಕ ಮಹಿ

ವಿಕೆಟ್‌ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸುತ್ತಿದ್ದರು. ಇದರಿಂದ ಎದುರಾಳಿ ತಂಡಕ್ಕೆ ಮಹಿಯ ಗೇಮ್‌ ಪ್ಲಾನ್‌ಗಳನ್ನು ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟವಾಗ್ತಿತ್ತು. ಹಾಗೇ, ಧೋನಿ ಸಹ ಆಟಗಾರರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಿದ್ದರು. ಇದರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸುತ್ತಿದ್ದರು. ಇದುವೇ ಧೋನಿಯ ಗೆಲುವಿನ ಸೂತ್ರವಾಗಿತ್ತು. ಹಾಗಾಗಿ ಧೋನಿ ದಿ ಬೆಸ್ಟ್ ನಾಯಕ ಎನಿಸಿಕೊಂಡಿದ್ದು.

ನಾಯಕತ್ವದಿಂದ ಬದಲಾದ ಧೋನಿ

ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾಗಿದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು. ಇನ್ನೊಂದೆಡೆ, ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್‌ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್‌ ಶಾಟ್‌ ಕ್ರಿಕೆಟ್‌ ಪ್ರಿಯರ ಮನ ಗೆದ್ದಿತ್ತು. ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್‌ ಹೇಗೆಲ್ಲಾ ವರ್ಕ್‌ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾಗಿದ್ದರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್‌ಶಿಪ್‌ ಕ್ವಾಲಿಟಿ ಫೇಮಸ್.

2016ರಲ್ಲಿ ಮಂಕಾಗಿದ್ದರು

ಕೂಲ್‌ ಕ್ಯಾಪ್ಟನ್‌ಗೆ ಅದೃಷ್ಟ ಕೈಕೊಟ್ಟಿತ್ತು. ಧೋನಿಯ ಅದೃಷ್ಟದಿಂದಲೇ ಟೀಮ್ ಇಂಡಿಯಾ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದ್ದರು. ಆದರೆ ಆಟಗಾರನಾಗಿ ಹಾಗೂ ನಾಯಕನಾಗಿ ಈ ವರ್ಷ ವಿಫಲರಾಗಿದ್ದರು. ಇದು ಕಾಲಚಕ್ರ. ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಜಗದ ನಿಯಮ ಕೂಡ ಹೌದು. ಯಶಸ್ಸಿನ ಉತ್ತುಂಗಕ್ಕೇರಿದ ಧೋನಿಗೆ ಹಿನ್ನಡೆಯಾಗಿದೆ. ಹಾಗಂತ ಈಗ ಧೋನಿಯ ಆಟವನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಜಸ್ಟ್‌ ಬ್ಯಾಡ್‌ ಟೈಮ್‌ ಅಷ್ಟೇ.

ಮರೆಯಲು ಅಸಾಧ್ಯ ಧೋನಿ ಸಾಧನೆ

ಏನೇ ಆದ್ರೂ, ಧೋನಿ ದಿ ಗ್ರೇಟ್ ಲೀಡರ್. ಲೀಡರ್ ಯಾವತ್ತೂ ತಲೆಬಾಗಲ್ಲ. ತಲೆಬಾಗುವುದು ಇಲ್ಲ. ತಾನು ನಡೆದದ್ದೇ ದಾರಿ. ಆದ್ರೆ ದಾರಿ ಸರಿ ಇಲ್ಲ ಅಂದಾಗ ಅಡ್ಡ ದಾರಿ ಹಿಡಿಯುವುದಲ್ಲ. ದಾರಿ ಸರಿಪಡಿಸಿಕೊಂಡು ಮುನ್ನಡೆಯಬೇಕು. ಅದು ಆಗದಿದ್ರೆ ಬೇರೆಯವರಿಗೆ ನಡೆಯಲು ಅವಕಾಶ ಮಾಡಿಕೊಡಬೇಕು. ಇದೀಗ ಮಹೇಂದ್ರ ಸಿಂಗ್ ಧೋನಿ ಅದನ್ನೇ ಮಾಡಿದ್ದಾರೆ. ಆದ್ರೆ ತನ್ನ ಸೂತ್ರವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಅದು ಮಹಿ ಸ್ಟೈಲ್.

ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್