ಧಾರವಾಡದ ನಫ್ರೀನ್ ತಾಜ್ ಎಂಬುವವರಿಗೆ ಪತಿ ಗುಲ್ಜರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಲಾಖ್ ನೀಡಿದ್ದರು.
ಧಾರವಾಡ(ಅ.07): ಕಾನ್ಫರೆನ್ಸ್ ನಲ್ಲೇ ತಲಾಖ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜೆಎಂಎಫ್'ಸಿ ಎರಡನೇ ನ್ಯಾಯಾಲಯ ಮಹತ್ವದ ಅದೇಶ ನೀಡಿದೆ.
ಧಾರವಾಡದ ನಫ್ರೀನ್ ತಾಜ್ ಎಂಬುವವರಿಗೆ ಪತಿ ಗುಲ್ಜರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಲಾಖ್ ನೀಡಿದ್ದರು. ಪತಿಯ ನಡವಳಿಕೆ ವಿರುದ್ಧ ನಫ್ರೀನ್ ತಾಜ್ ಕೋರ್ಟ್ ಮೆಟ್ಟಲೇರಿದ್ದರು. ಇಂದು ವಿಚಾರಣೆ ನಡೆಸಿದ ಜೆಎಂಎಫ್'ಸಿ ನ್ಯಾಯಾಲಯ ಗುಲ್ಜಾರ್ ಕುಟುಂಬದ ಆರು ಮಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮನ್ಸ್ ಜಾರಿ ಮಾಡಿದೆ.
ಕೋರ್ಟ್'ಗೆ ಹಾಜರಾಗುವಂತೆ ನ್ಯಾಯಾಧೀಶರಾದ ಕುರ್ನಿಕಾಂತ್ ದಾಕು ಅವರು ಸೂಚನೆ ನೀಡಿದ್ದಾರೆ. ಅಲ್ಲದೆ ವಿದೇಶದಲ್ಲಿರುವ ಗಂಡನನ್ನು ಭಾರತಕ್ಕೆ ಕರೆತರುವಂತೆ ವಿದೇಶಾಂಗ ಇಲಾಖೆ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ ಎಂದು ನೊಂದ ಮಹಿಳೆ ಪರ ವಾದ ಮಾಡುತ್ತಿರುವ ವಕೀಲ ಅರುಣ ಜೋಶಿ ತಿಳಿಸಿದ್ದಾರೆ. ಪ್ರಸ್ತುತ ಗುಲ್ಜರ್ ಅವರು ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ವಿಡಿಯೋ ಕಾನ್ಫರೆನ್ಸ ತಲಾಖ್ ಪ್ರಕರಣ ಕುತೂಹಲ ಕೆರಳಿಸಿದೆ.
