ಬೆಳ್ಳಂಬೆಳ್ಳಗ್ಗೆ ಪೊರಕೆ ಹಿಡಿದ ಸಂಸದೆ ಹೇಮಾ ಮಾಲಿನಿ| ಸಂಸತ್ತಿನ ಆವರಣ ಗುಡಿಸಿದ ಹೇಮಾ ಮಾಲಿನಿ| ಸಂಸತ್ತಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮ| ಸ್ವಚ್ಛತಾ ಅಭಿಯಾನದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ ಹೇಮಾ ಮಾಲಿನಿ|
ನವದೆಹಲಿ(ಜು.13): ಸ್ವಚ್ಛ ಭಾರತ ಅಭಿಯಾನ್ ಕೇವಲ ಕಾಗದದ ಮೇಲೆ ಯಶಸ್ವಿಯಾಗಿದೆ ಎಂಬುದು ಅದರ ವಿರೋಧಿಗಳ ಅಂಬೋಣ. ಸಾಧಿಸಿದ್ದೇನು, ಸಾಧಿಸಬೇಕಾಗಿರುವುದೇನು ಎಂಬುದರ ಕುರಿತಷ್ಟೇ ಪ್ರಧಾನಿ ಮೋದಿ ಯೋಚಿಸುವುದು.
ಅದರಂತೆ ಕಳೆದ 5 ವರ್ಷದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಅನೇಕ ಸಾಧನೆಗಳನ್ನು ಮಾಡಲಾಗಿದೆ. ಭವಿಷ್ಯದಲ್ಲಿ ಇನ್ನೂ ಅನೇಕ ಸಾಧನೆಗಳು ಈ ಯೋಜನೆಯಡಿ ಮೂಡಿ ಬರಲಿವೆ ಎಂಬುದೂ ಖಚಿತ.
ಅದರಂತೆ ಇಂದು ಸಂಸತ್ತಿನಲ್ಲಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಅತ್ಯಂತ ಉತ್ಸುಕರಾಗಿ ಭಾಗವಹಿಸಿದ್ದು, ಸಂಸತ್ತಿನ ಆವರಣವನನು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳದರು.
ಪ್ರಮುಖವಾಗಿ ಬಿಜೆಪಿಯ ಮಥುರಾ ಲೋಕಸಭಾ ಕ್ಷೇತ್ರದ ಸಂಸದೆ ಹೇಮಾ ಮಾಲಿನಿ, ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿಜೆಪಿಯ ಮತ್ತೋರ್ವ ಸಂಸದ ಅನುರಾಗ್ ಠಾಕೂರ್ ಅವರೊಂದಿಗೆ ಸೇರಿ ಹೇಮಾ ಮಾಲಿನಿ ಸಂಸತ್ತಿನ ಆವರಣವನ್ನು ಸ್ವಚ್ಛಗೊಳಿಸಿದರು.
