ಬೆಳ್ತಂಗಡಿ (ಸೆ. 11): ಲೋಕ ಕಲ್ಯಾಣಾರ್ಥವಾಗಿ 2019 ರ ಫೆಬ್ರುವರಿಯಲ್ಲಿ ಧರ್ಮಸ್ಥಳ ಭಗವಾನ್ ಬಾಹುಬಲಿಗೆ ಮಹಾ ಮಜ್ಜನ ನಡೆಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಮಹಾಮಸ್ತಕಾಭಿಷೇಕ ಧಾರ್ಮಿಕ ಕಾರ್ಯಕ್ರಮದ ವಿವರ ನೀಡಿದರು. 1982 ರಲ್ಲಿ ಪ್ರತಿಷ್ಠಾಪನೆಗೊಂಡ 48 ಅಡಿ ಎತ್ತರದ ಬಾಹುಬಲಿಗೆ ಆವಾಗ ಮೊದಲ ಮಸ್ತಕಾಭಿಷೇಕ ನಡೆಸಲಾಗಿತ್ತು. ಬಳಿಕ 1994, 2007 ರಲ್ಲಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. ಇದೀಗ 2019 ರಲ್ಲಿ  4ನೇ ಬಾರಿಗೆ ಮಹಾಭಿಷೇಕವನ್ನು ನೆರವೇರಿಸಲಾಗುವುದು. ಜೀನೇ ಔರ್ ಜೀನೇ ದೋ (ಬದುಕು ಮತ್ತು ಬದುಕಲು ಬಿಡು) ಎಂಬ ಧ್ಯೆಯ ವಾಕ್ಯದಡಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.