ಧಾರವಾಡ ಕೇಂದ್ರ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ

ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ದಿಢೀರ್​ ದಾಳಿ ನಡೆಸಿದರು. ಧಾರವಾಡ ಎಸ್​ಪಿ ಜಿ.ಸಂಗೀತಾ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಎಲ್ಲಾ ಸೆಲ್​ಗಳನ್ನು ಪರಿಶೀಲಿಸಿದರು. ದಾಳಿ ವೇಳೆ ಒಂದು ಮೊಬೈಲ್​ ಹಾಗೂ 6500 ರೂಪಾಯಿ ನಗದು ಹಾಗೂ ಒಂದು ಸಿಮ್​ ಕಾರ್ಡ್​ ಸಿಕ್ಕಿದೆ. ಪ್ರಸ್ತುತ ಕಾರಾಗೃಹದಲ್ಲಿ ಜಾಮರ್​ ಅಳವಡಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred